Viral Video : ಮೀನಿಗೆ ಬೀರು ಕುಡಿಸಿದ ಅಸಾಮಿ – ಮುಂದೇನಾಯ್ತು ನೀವೇ ನೋಡಿ

Viral Video : ಸಾಕುಪ್ರಾಣಿಗಳಿಗೆ ಕೆಲವರು ಮಧ್ಯ ಕುಡಿಸಿ ಮಜಾ ತೆಗೆದುಕೊಳ್ಳುವಂತಹ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿದೆ. ಅಂತಿಯೇ ಇದೀಗ ಇಲ್ಲೊಬ್ಬ ಆಸಾಮಿ ಮೀನನ್ನು ಹಿಡಿದು ಅದಕ್ಕೆ ಬೀರು ಕುಡಿಸಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

 

ನೀರಿನಲ್ಲಿರುವ ಮೀನು ನೀರು ಹಾಗೂ ಸಣ್ಣ ಪುಟ್ಟ ಆಹಾರವನ್ನು ಹೊರತುಪಡಿಸಿ ಬೇರೆನನ್ನು ಸೇವಿಸುವುದಿಲ್ಲ, ನೀರಿನ ಹೊರತಾದ ಯಾವುದೇ ಪಾನೀಯವೂ ಅದಕ್ಕೆ ಅಪಾಯಕಾರಿ. ವ್ಯಕ್ತಿಯೊಬ್ಬ ದೊಡ್ಡ ಗಾತ್ರದ ಮೀನನ್ನು ಕೈಯಲ್ಲಿ ಹಿಡಿದು ಅದಕ್ಕೆ ಬಾಟಲಿಯಿಂದ ಬೀರು ಕುಡಿಸಿದ್ದಾನೆ. ನೀರಿನಿಂದ ಮೇಲೆ ಇರುವ ಮೀನು ಬಹುಶಃ ಜೀವ ಉಳಿಸಿಕೊಳ್ಳುವ ಅನಿವಾರ್ಯತೆಗೋ ಏನೋ ಬೀರನ್ನು ನೀರಿನಂತೆ ಕುಡಿಯುತ್ತಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೋಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

https://www.instagram.com/reel/DGchojiSz7n/?igsh=MXI5MTVwcHZyMndydA==

 

ಮದ್ಯವು ಮೀನುಗಳಿಗೆ ಹಾನಿಕಾರಕವೇ?

ಮೀನುಗಳು ಹೆಚ್ಚಿನ ಸಾಂದ್ರತೆಗಳಿಗೆ ಒಡ್ಡಿಕೊಳ್ಳುವುದರಿಂದ ಮದ್ಯ ಸೇವನೆಯೂ ಮೀನುಗಳಿಗೆ ದಿಗ್ಭ್ರಮೆ, ದುರ್ಬಲವಾದ ಈಜು ಮತ್ತು ವಿಷವೇರುವ ಸಂಭವ ಇರುತ್ತದೆ. ಜರ್ನಲ್ ಆಫ್ ಎಕ್ಸ್‌ಪರಿಮೆಂಟಲ್ ಬಯಾಲಜಿಯಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಮೀನುಗಳು ಮದ್ಯವನ್ನು ಮನುಷ್ಯರಿಗಿಂತ ವಿಭಿನ್ನವಾಗಿ ಸಂಸ್ಕರಿಸುತ್ತವೆ, ಆದರೆ ದೀರ್ಘಕಾಲದವರೆಗೆ ಮದ್ಯ ಸೇವಿಸುವುದರಿಂದ ಅವುಗಳ ನರಮಂಡಲ ಮತ್ತು ಅಂಗಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ.

Comments are closed.