of your HTML document.

Passport: ಪಾಸ್‌ಪೋರ್ಟ್ ಇಲ್ಲದೆ ಭಾರತ ಪ್ರವೇಶಕ್ಕೆ ಕಠಿಣ ಕ್ರಮ: ಕೇಂದ್ರ ಸರ್ಕಾರ

Passport: ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ವಲಸೆ ನಿಯಮಗಳನ್ನು ಕಠಿಣಗೊಳಿಸಿದಂತೆ, ಭಾರತವೂ ಇದೀಗ ಕಠಿಣ ವಲಸೆ ನೀತಿ ತರಲು ಮುಂದಾಗಿದೆ. ಮಾ.10 ರಂದು ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಲಸೆ ಮತ್ತು ಅಕ್ರಮ ವಿದೇಶಿ ವಲಸಿಗರ ನಿಯಂತ್ರಣ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ.

1920ರ ಪಾಸ್‌ಪೋರ್ಟ್‌ (Passport)ಕಾಯ್ದೆ, 1939ರ ವಿದೇಶಿಯರ ನೋಂದಣಿ ಕಾಯ್ದೆ, 1946ರ ವಿದೇಶಿಯರ ಕಾಯ್ದೆ ಮತ್ತು 2000ದ ವಲಸೆ ಕಾಯ್ದೆಗಳನ್ನು ರದ್ದುಪಡಿಸಿ ಹೊಸ ಸಮಗ್ರ ಕಾನೂನು ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಹೊಸ ಮಸೂದೆ ಪ್ರಕಾರ, ಪಾಸ್‌ಪೋರ್ಟ್ ದಾಖಲೆ ಇಲ್ಲದೆ ಭಾರತ ಪ್ರವೇಶಿಸುವ ವಿದೇಶಿಯರಿಗೆ 5 ವರ್ಷಗಳ ಜೈಲು ಶಿಕ್ಷೆ ಅಥವಾ 5 ಲಕ್ಷ ರೂಪಾಯಿ ದಂಡ ಅಥವಾ ಎರಡನ್ನೂ ವಿಧಿಸುವ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ.

Comments are closed.