Death : ಹಲ್ಲು ನೋವಿಗೆ ಆಸ್ಪತ್ರೆಗೆ ಬಂದ ಮಹಿಳೆ ಸಾವು – ಸಿಟಿ ಸ್ಕ್ಯಾನ್ ಮಾಡಿದಾಗ ಬಯಲಾಯ್ತು ಬೆಚ್ಚಿ ಬೀಳೋ ಸಂಗತಿ!!

Death : ಹಲ್ಲು ನೋವೆಂದು ಆಸ್ಪತ್ರೆಗೆ ಬಂದ ಮಹಿಳೆ ಒಬ್ಬರು ಸಾವನ್ನಪ್ಪಿದ್ದಾರೆ ಸಾವಿನ ಕಾರಣವನ್ನು ತಿಳಿಯಲು ಸಿಟಿ ಸ್ಕ್ಯಾನ್ ಮಾಡಿದಾಗ ವೈದ್ಯರೇ ಬೆಚ್ಚಿ ಬಿದ್ದ ಪ್ರಕರಣ ಒಂದು ಬೆಳಕಿಗೆ ಬಂದಿದೆ.

 

ಹೌದು, ಯುಕೆಯ ಡರ್ಹಾಮ್ನಲ್ಲಿ ವಾಸಿಸುವ 34 ವರ್ಷದ ಲೀ ರೋಜರ್ಸ್ ಸುಮಾರು ಎರಡು ವಾರಗಳಿಂದ ಹಲ್ಲುನೋವಿನಿಂದ ಬಳಲುತ್ತಿದ್ದರು. ನೋವು ಸಹಿಸಲು ಅಸಾಧ್ಯವಾದಾಗ ಆಕೆಯ ಕುಟುಂಬ ಸದಸ್ಯರು ಅವಳನ್ನು ಆಂಬ್ಯುಲೆನ್ಸ್ ನಲ್ಲಿ ನಾರ್ತ್ ಡರ್ಹಾಮ್ ಯೂನಿವರ್ಸಿಟಿ ಆಸ್ಪತ್ರೆಗೆ ಕರೆದೊಯ್ದರು. ಶಸ್ತ್ರಚಿಕಿತ್ಸೆ ನಂತರ ಕೆಲವು ದಿನಗಳ ನಂತರ ಆಕೆ ಮೃತಪಡುತ್ತಾಳೆ.

 

ವೈದ್ಯರು ಮಹಿಳೆಯ ಶವದ ಮರಣೋತ್ತರ ಪರೀಕ್ಷೆ ನಡೆಸಿದಾಗ ಆಕೆಯ ಸಾವಿನ ನಿಜವಾದ ಕಾರಣ ಬಹಿರಂಗವಾಗಿದೆ. ಇದನ್ನು ಕಂಡು ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ಏಕೆಂದರೆ ಮಹಿಳೆಯ ಸಾವಿಗೆ ನಿಜವಾದ ಕಾರಣ ಹಲ್ಲುನೋವು ಅಲ್ಲ. ಸಿಟಿ ಸ್ಕ್ಯಾನ್ ಇದು ಅಲರ್ಜಿ ಎಂದು ತೋರಿಸಿದೆ. ಅಲರ್ಜಿ ಅವಳ ಬಾಯಿಯಿಂದ ಅವಳ ಇಡೀ ದೇಹಕ್ಕೆ ಹರಡಿದೆ. ಇದು ಮಾರಣಾಂತಿಕ ಬ್ಯಾಕ್ಟೀರಿಯಾದ ಸೋಂಕು ಎಂದು ವೈದ್ಯರು ತಿಳಿಸಿದ್ದಾರೆ.

 

ಇನ್ನು ಈ ಸಮಯದಲ್ಲಿ, ವೈದ್ಯರು ಅವಳನ್ನು ಉಳಿಸಲು 90 ನಿಮಿಷಗಳ ಕಾಲ ಶ್ರಮಿಸಿದ್ದಾರೆ. ಆದರೆ ಕೊನೆಯಲ್ಲಿ ವೈದ್ಯರು ಅವಳು ಸತ್ತಿದ್ದಾಳೆ ಎಂದು ಘೋಷಿಸಬೇಕಾಯಿತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.