Pune: ರಾಜ್ಯ ಸಾರಿಗೆ ಬಸ್ನೊಳಗೆ ಮಹಿಳೆ ಮೇಲೆ ಅತ್ಯಾಚಾರ

Pune: 26 ವರ್ಷದ ಮಹಿಳೆಯೋರ್ವಳ ಮೇಲೆ ರಾಜ್ಯ ಸಾರಿಗೆ ಬಸ್ನೊಳಗೆ ವ್ಯಕ್ತಿಯೋರ್ವ ಅತ್ಯಾಚಾರ ಮಾಡಿದ ಘಟನೆ ನಡೆದಿದೆ. ಆರೋಪಿ ಪತ್ತೆಗೆ ಪೊಲೀಸರು ತಂಡ ರಚಿಸಿದ್ದಾರೆ.

ದತ್ತ ಗಾದೆ ಎನ್ನುವ ವ್ಯಕ್ತಿ ಅತ್ಯಾಚಾರ ಮಾಡಿದ್ದು, ಈತನ ಮೇಲೆ ಈ ಹಿಂದೆ ಕಳ್ಳತನ ಮತ್ತು ಚೈನ್ ಸ್ನ್ಯಾಚಿಂಗ್ ಪ್ರಕರಣಗಳು ಇದೆ. ಸ್ವರ್ಗೇಟ್ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಅತಿ ದೊಡ್ಡ ಬಸ್ ಜಂಕ್ಷನ್ಗಳಲ್ಲಿ ಒಂದು. ಮಂಗಳವಾರ ಮಹಿಳೆ ಮುಂಜಾನೆ 5.30 ರ ಹೊತ್ತಿಗೆ ಫ್ಲಾಟ್ಫಾರ್ಮ್ ಒಂದರಲ್ಲಿ ಪೈಥಾನ್ಗೆ ಬಸ್ಗೆಂದು ಕಾಯುತ್ತಿದ್ದಾಗ ವ್ಯಕ್ತಿಯೊಬ್ಬ ಬಂದು ಬಸ್ ಮತ್ತೊಂದು ಪ್ಲಾಟ್ಫಾರ್ಮ್ಗೆ ಬಂದಿದೆ ಎಂದು ಹೇಳಿದ್ದಾನೆ. ಆಕೆಯನ್ನು ನಿಲ್ದಾಣದ ಆವರಣದಲ್ಲಿ ನಿರ್ಜನ ಸ್ಥಳದಲ್ಲಿ ನಿಲ್ಲಿಸಿದ್ದ ಖಾಲಿ ಬಸ್ಗೆ ಕರೆದೊಯ್ದು, ಆಕೆ ಬಸ್ ಹತ್ತುತ್ತಿದ್ದಂತೆ ಆತ ಕೂಡಾ ಹಿಂಬಾಲಿಸಿದ್ದು, ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.
Comments are closed.