Sudan Military Plane Crash: ಸುಡಾನ್‌ ಮಿಲಿಟರಿ ವಿಮಾನ ಅಪಘಾತ; 10 ಸಾವು

Sudan Military Plane Crash: ಮಂಗಳವಾರ ಸೂಡಾನ್‌ ಮಿಲಿಟರಿ ವಿಮಾನವೊಂದು ರಾಜಧಾನಿ ಖಾರ್ಟೂಮ್‌ನ ಹೊರವಲಯದಲ್ಲಿ ಪತನಗೊಂಡಿದೆ. ಹಲವಾರು ಅಧಿಕಾರಿಗಳು, ನಾಗರಿಕರು ಸೇರಿ ಕನಿಷ್ಠ 10 ಜನರು ಸಾವಿಗೀಡಾಗಿದ್ದಾರೆ ಎಂದು ಸೇನೆ ಹೇಳಿದೆ.

ಸೇನಾ ವಿಮಾನವು ಟೇಕ್‌ ಆಫ್‌ ಆಗುವ ಸಮಯದಲ್ಲಿ ಪತನಗೊಂಡಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅಗ್ನಿಶಾಮಕ ತಂಡಗಳು ಅಪಘಾತದ ಸ್ಥಳದಲ್ಲಿ ಬೆಂಕಿ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಡರಾತ್ರಿ ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಆಂಟೊನೊವ್‌ ವಿಮಾನ ತಾಂತ್ರಿಕ ದೋಷದಿಂದ ಪತನವಾಗಿರುವುದಾಗಿ ಮಿಲಿಟರಿ ಮೂಲವು ಎಎಫ್‌ಪಿಗೆ ಸುದ್ದಿಗೆ ಸಂಸ್ಥೆ ತಿಳಿಸಿತ್ತು.

Comments are closed.