Sirsi: ಶಿವರಾತ್ರಿ ಹಬ್ಬಕ್ಕೆ ಮನೆಗೆ ಬಂದಿದ್ದ ಗರ್ಭಿಣಿ ಮಗಳು, ಅಳಿಯನಿಗೆ ಚಾಕು ಇರಿದ ತಂದೆ

Share the Article

Sirsi: ಶಿವರಾತ್ರಿ ಹಬ್ಬಕ್ಕೆ ಇಂದು (ಫೆ.26) ಮನೆಗೆ ಬಂದಿದ್ದ ಮಗಳು, ಅಳಿಯನಿಗೆ ಚಾಕು ಇರಿದು ತಂದೆಯೋರ್ವ ನಂತರ ತಾನೂ ವಿಷ ಸೇವಿಸಿದ ಘಟನೆ ತಾಲೂಕಿನ ದಾಸನಕೊಪ್ಪ ರಂಗಾಪುರದಲ್ಲಿ ನಡೆದಿದೆ.

ಮಗಳು ಕವನ, ಅಳಿಯ ಮನೋಜ ಕಮಾಟಿ ಎಂಬುವವರ ಮೇಲೆ ತಂದೆ ಶಂಕರ ಹನುಮಂತ ಕಮ್ಮಾರ ಬದನಗೋಡು (53) ಎಂಬಾತ ಚಾಕು ಇರಿದಿದ್ದಾನೆ. ಹಾಗೂ ತಾನೂ ವಿಷ ಸೇವಿಸಿದ್ದಾನೆ. ಕವನ ಶಿರಸಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಂದೆಯನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ಅಳಿಯ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಗರ್ಭಿಣಿಯಾಗಿದ್ದ ಕವನ ಮನೆಯವರಿಗೆ ಇಷ್ಟವಿಲ್ಲದೇ ಮದುವೆಯಾಗಿದ್ದಳು ಎಂದು ವರದಿಯಾಗಿದೆ. ಸಿಪಿಐ ಶಶಿಕಾಂತ ವರ್ಮಾ ಮಾರ್ಗದರ್ಶನದಲ್ಲಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

Comments are closed.