Passport in Modi Govt: ಭಾರತಕ್ಕೆ ಬರುವ ವಿದೇಶಿಯರಿಗೆ ಬರಲಿದೆ ಹೊಸ ಕಾನೂನು

Passport in Modi Govt: ಅಮೆರಿಕಾದಲ್ಲಿ ಟ್ರಂಪ್ ಅಧಿಕಾರ ವಹಿಸುತ್ತಿದ್ದಂತೆ ಕಠಿಣ ವಲಸೆ ನಿಯಮ ಜಾರಿಗೆ ತಂದಿದ್ದಾರೆ. ಭಾರತ ಕೂಡಾ ಕಠಿಣ ವಲಸೆ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ. ಮಾ.10 ರಂದು ನಡೆಯಲಿರುವ ಸಂಸತ್ ಬಜೆಟ್ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಲಸೆ ಮತ್ತು ಅಕ್ರಮ ವಿದೇಶಿ ವಲಸಿಗರ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇರಲಿದೆ.
1920 ಭಾರತದ ಪಾಸ್‌ಪೋರ್ಟ್ ಕಾಯ್ದೆ ಅನುಸಾರ, ವಿದೇಶಿಯರ ನೋದಣಿ ಕಾಯ್ದೆ 1939, ವಿದೇಶಿಯರ ಕಾಯ್ದೆ 1946 ಮತ್ತು ವಲಸೆ ಕಾಯ್ದೆ 2000 ಇವು ಭಾರತದಲ್ಲಿ ವಿದೇಶಿಯರಿಗೆ ಸಂಬಂಧಿಸಿದ ಅಂಶಗಳು. ಈ ಅಸ್ತಿತ್ವದಲ್ಲಿರುವ ನಾಲ್ಕು ಕಾನೂನನ್ನು ಕೂಡಾ ರದ್ದು ಮಾಡಿ ಹೊಸ ಕಾನೂನು ಜಾರಿಗೆ ಬರುವ ಕುರಿತು ವರದಿಯಾಗಿದೆ.
ಹೊಸ ಮಸೂದೆಯ ರೀತಿಯಲ್ಲಿ, ಪಾಸ್‌ಪೋರ್ಟ್ ದಾಖಲೆಯಿಲ್ಲದೆ ಭಾರತಕ್ಕೆ ಪ್ರವೇಶಿಸುವ ವಿದೇಶಿಯರು ಐದು ವರ್ಷಗಳ ಜೈಲು ಶಿಕ್ಷೆ, ಅಥವಾ ಐದು ಲಕ್ಷ ರೂ. ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.
Comments are closed.