of your HTML document.

Kodagu: ಎರಡನೇ ಬಾರಿ ಏಶಿಯನ್ ಕ್ರೀಡಾಕೂಟಕ್ಕೆ ಕೆ.ಎಂ. ಹಸ್ಸನ್ ಆಯ್ಕೆ

Kodagu: ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಅರೆಕಾಡು ಗ್ರಾಮದ ನೇತಾಜಿ ನಗರ ನಿವಾಸಿಯಾದ ಕೆ.ಎಂ. ಹಸ್ಸನ್ ಅವರು ಕರ್ನಾಟಕ ರಾಜ್ಯ ಪಂಜ ಕುಸ್ತಿ ಸಂಘದ ವತಿಯಿಂದ ದಿನಾಂಕ 7/1/2024 ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪ್ಯಾರ ಪಂಜ ಕುಸ್ತಿ ಕ್ರೀಡಾಕೂಟದಲ್ಲಿ ಭಾಗವಹಿಸಿ, ಚಿನ್ನದ ಪದಕ ಮತ್ತು ಬೆಳ್ಳಿಯ ಪದಕ ಪಡೆದಿದ್ದಾರೆ.

ಅಂತೆಯೇ ಮಹಾರಾಷ್ಟ್ರದ ನಾಗಪುರದಲ್ಲಿ ದಿನಾಂಕ 6/6/2024 ರಿಂದ10/6/2024 ರವರಿಗೆ ನಡೆದ ರಾಷ್ಟ್ರಮಟ್ಟದ ಪ್ಯಾರಾ ಪಂಜ ಕುಸ್ತಿಯಲ್ಲಿ ಕಂಚಿನ ಪದಕ ಪಡೆಯುವ ಮೂಲಕ ದಿನಾಂಕ 4/5/2025 ರಿಂದ 5/5/2025 ರವರೆಗೆ ದೆಹಲಿಯಲ್ಲಿ ನಡೆಯುವ ಏಶಿಯನ್ ಪ್ಯಾರಾ ಪಂಜ ಕುಸ್ತಿ ಕ್ರೀಡಾಕೂಟಕ್ಕೆ ಕೆ ಎಂ ಆಯ್ಕೆಯಾಗಿರುತ್ತಾರೆ.

Comments are closed.