Kerala: ಕುಟುಂಬದ 5 ಜನ ಸೇರಿ ಪ್ರೇಯಸಿಯ ಭೀಕರ ಕೊಲೆ ಪ್ರಕರಣ; ಹುಚ್ಚನಂತೆ ವರ್ತಿಸುತ್ತಿರುವ ಅಫಾನ್

Kerala: ತನ್ನ ಕುಟುಂಬದವರು ಹಾಗೂ ಪ್ರೇಯಸಿಯನ್ನು ಸೇರಿ ಕೊಂದಿರುವುದಕ್ಕೆ ಒಂದು ಚೂರು ಪಶ್ಚಾತ್ತಾಪವಿಲ್ಲದೆ ಹುಚ್ಚನಂತೆ ವರ್ತಿಸಿದ ಅಫಾನ್‌ನನ್ನು ಆಸ್ಪತ್ರೆಯಲ್ಲಿ ಆತನ ಕೈಗೆ ಕೋಳ ತೊಡಿಸಿ ಹಾಸಿಗೆಗೆ ಕಟ್ಟಲಾಗಿದೆ ಎನ್ನುವ ವರದಿಯಾಗಿದೆ.
ತನ್ನ ಪ್ರೇಯಸಿ, ಕುಟುಂಬದವರನ್ನು ಸೇರಿ ಐದು ಮಂದಿಯನ್ನು ಕೊಲೆ ಮಾಡಿದ ಬಳಿಕ ತಾನೂ ವಿಷ ಸೇವಿಸಿ ಪೊಲೀಸ್ ಠಾಣೆಗೆ ಬಂದ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದ. ವೈದ್ಯರು ಮತ್ತು ಪೊಲೀಸರ ಮೇಲೆ ಹಲ್ಲೆಗೆ ಯತ್ನ ಮಾಡಿದ ಆತನ ಕೈಗಳನ್ನು ಕಟ್ಟಿ ಎರಡೂ ಕಾಲುಗಳನ್ನು ಹಾಸಿಗೆಗೆ ಕಟ್ಟಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ರಕ್ತ ಮತ್ತು ಮೂತ್ರದ ಮಾದರಿಗಳನ್ನು ಸಂಗ್ರಹ ಮಾಡಲಾಗಿದೆ. ಚಿಕಿತ್ಸೆಗೆ ಸಹಕರಿಸದ ಕಾರಣ ಪ್ರಜ್ಞಾಹೀನನನ್ನಾಗಿ ಮಾಡಿ ಮಾದಿರಿಗಳನ್ನು ಸಂಗ್ರಹಿಸಲಾಗಿದೆ.
ಮಾದಕ ವ್ಯಸನಿಯಾಗಿರಬಹುದು ಎಂದು ಅಂದಾಜಿಸಲಾಗಿದ್ದು, ಪರೀಕ್ಷೆಯ ವರದಿ ಬಂದ ಬಳಿಕ ತಿಳಿಯಬೇಕಷ್ಟೇ. ಕೊಲೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.
Comments are closed.