Banglore: ಶಿಶು ಕಿಡ್ನ್ಯಾಪ್‌ ಪ್ರಕರಣ; ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ ಒಂದು ಲಕ್ಷ ರೂ. ದಂಡ ವಿಧಿಸಿದ ಕೋರ್ಟ್‌

Share the Article

Balnglore: ಶಿಶು ಕಿಡ್ನ್ಯಾಪ್‌ ಪ್ರಕರಣದ ಆರೋಪಿಗೆ ಕೋರ್ಟ್‌ 10 ವರ್ಷ ಜೈಲು ಶಿಕ್ಷೆ ಒಂದು ಲಕ್ಷ ರೂ. ದಂಡ ವಿಧಿಸಿದೆ. ವಾಣಿ ವಿಲಾಸ ಆಸ್ಪತ್ರೆಯಿಂದ ಅಪರಾಧಿ ರಶ್ಮಿ ಐದು ವರ್ಷಗಳ ಹಿಂದೆ ಆಗ ತಾನೇ ಹುಟ್ಟಿದ ಮಗುವನ್ನು ಕಿಡ್ನ್ಯಾಪ್‌ ಮಾಡಿದ್ದಳು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಹೆಚ್‌ 51 ರ ನ್ಯಾಯಾಧೀಶರು ಅಪರಾಧಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಂದು ಲಕ್ಷ ದಂಡವನ್ನು ವಿಧಿಸಿದೆ.

ಮಗು ಕಿಡ್ನ್ಯಾಪ್‌ ಕುರಿತ ಪ್ರಕರಣ ಚಾಮರಾಜಪೇಟೆಯಲ್ಲಿ ದಾಖಲಾಗಿತ್ತು. ನಂತರ ಬಸವನಗುಡಿ ಮಹಿಳಾ ಠಾಣೆಗೆ ವರ್ಗಾವಣೆಯಾಗಿತ್ತು. ರಶ್ಮಿ ತಲೆಮರೆಸಿಕೊಂಡಿದ್ದು, ಒಂದು ವರ್ಷದ ಬಳಿಕ ಮಹಿಳಾ ಠಾಣೆ ಇನ್ಸ್‌ಪೆಕ್ಟರ್‌ ಮೀನಾಕ್ಷಿ ಮತ್ತು ತಂಡ ಬಂಧನ ಮಾಡಿ ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದರು. ವಿಚಾರಣೆ ಇದೀಗ ಕೋರ್ಟ್‌ನಲ್ಲಿ ಮುಗಿದಿದೆ. ಅಪರಾಧಿಗೆ ಶಿಕ್ಷೆ ಪ್ರಮಾಣವನ್ನು ಕೋರ್ಟ್‌ ಪ್ರಕಟಿಸಿದೆ.

Comments are closed.