Chennai: ಕಾರು-ಬಸ್ ನಡುವೆ ಭೀಕರ ಅಪಘಾತ; ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವು

Chennai: ಕಾರು ಹಾಗೂ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತ ನಡೆದಿದ್ದು, ಐವರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ನಡೆದಿದೆ. ತಮಿಳುನಾಡಿನ ಕರೂರ್ ಜಿಲ್ಲೆಯ ಕುಳಿತಲೈ ಬಳಿ ಈ ಅವಘಡ ಸಂಭವಿಸಿದೆ.

ಇಬ್ಬರು ಮಹಿಳೆಯರು ಸೇರಿ ಐವರು ಮೃತ ಹೊಂದಿದ್ದಾರೆ. ಮೃತರನ್ನು ಕೊಯಮತ್ತೂರ್ ಮೂಲದವರು ಎಂದು ಪೊಲೀಸರು ಹೇಳಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರನ್ನು ಕಟ್ ಮಾಡಿ ಕಾರಿನಲ್ಲಿದ್ದ ಮೃತದೇಹಗಳನ್ನು ತೆಗೆಯಬೇಕಾಯಿತು. ಕರೂರ್ಗೆ ಹೋಗುತ್ತಿದ್ದ ಕಾರು ತಿರುಪ್ಪೂರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಸರಕಾರಿ ಬಸ್ ನಡುವೆ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ.
Comments are closed.