Bantwala: ಚಾಲಕಿಯ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ಕಾರು; ವೃದ್ಧೆ ಸಾವು

Share the Article

Mangaluru: ಚಾಲಕಿಯ ನಿಯಂತ್ರಣ ತಪ್ಪಿ ಅಂಗಡಿಯೊಂದಕ್ಕೆ ನುಗ್ಗಿ, ಅಂಗಡಿಯಲ್ಲಿ ಕುಳಿತಿದ್ದ ವೃದ್ಧೆಗೆ ಡಿಕ್ಕಿ ಹೊಡೆದ ಪರಿಣಾಮ ವೃದ್ಧೆ ಮೃತಪಟ್ಟಿರುವ ಘಟನೆ ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾಮದ ಪಾಲೆದಮರ ಎಂಬಲ್ಲಿ ನಡೆದಿದೆ.

ವಾಮದಪದವು ನಿವಾಸಿ ಸುಮತಿ (91) ಮೃತ ವೃದ್ಧೆ.

ಚಾಲಕಿ ಶೋಭಾ ಅವರ ನಿಯಂತ್ರಣ ತಪ್ಪಿ ಕಾರು ಅಂಗಡಿಗೆ ನುಗ್ಗಿದೆ. ಮೊದಲಿಗೆ ಅಂಗಡಿ ಬಳಿ ಇದ್ದ ಗ್ರಾಹ ಲೂಯಿಸ್‌ ಡಿಕೋಸ್ತಾರಿಗೆ ಕಾರು ಡಿಕ್ಕಿ ಹೊಡೆದಿದ್ದು, ನಂತರ ಅಂಗಡಿ ಮುಂದೆ ಕುಳಿತಿದ್ದ ಸುಮತಿಯವರಿಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ವೃದ್ಧೆ ಸಮತಿಯವರನ್ನು ಸ್ಥಳೀಯರು ಕೂಡಲೇ ಮಂಗಳೂರು ಹೊರವಲಯದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಪೂಂಜಾಲಕಟ್ಟೆ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Comments are closed.