Cricket: ಮದುವೆ ಮಂಟಪದಲ್ಲಿ ಎಲ್‌ಇಡಿ ಸ್ಟ್ರೀನ್ ನಲ್ಲಿ ಭಾರತ – ಪಾಕಿಸ್ತಾನ ನಡುವಿನ ರೋಚಕ ಪಂದ್ಯದ ನೇರಪ್ರಸಾರ!

Cricket: ಅದಿಲಾಬಾದ್ ಪಟ್ಟಣದಲ್ಲಿ ನಡೆದ ಮದುವೆ ಮನೆಯೊಂದರಲ್ಲಿ ಭಾನುವಾರ ನಡೆದ ಭಾರತ ಪಾಕಿಸ್ತಾನ ನಡುವಿನ ರೋಚಕ ಪಂದ್ಯದ (Cricket) ವೀಕ್ಷಣೆಗೆ ಅವಕಾಶ ಮಾಡಿಕೊಡುವ ಮೂಲಕ ನವದಂಪತಿಗಳು ವಿಶೇಷವಾಗಿ ಗಮನ ಸೆಳೆದಿದ್ದಾರೆ.

ಎಲ್‌ಇಡಿ ಪರದೆಯ ಮೇಲೆ ಮದುವೆಯ ವಿಡಿಯೊವನ್ನು ತೋರಿಸುವ ಬದಲಾಗಿ, ಭಾರತ ಪಾಕಿಸ್ತಾನ ನಡುವೆ ನಡೆಯುತ್ತಿದ್ದ ಹೈವೋಲ್ವೇಜ್ ಪಂದ್ಯದ ನೇರಪ್ರಸಾರ ಮಾಡಲಾಗಿತ್ತು. ಪಂದ್ಯ ವೀಕ್ಷಿಸಿದ ಹಿತೈಷಿಗಳು, ಸ್ನೇಹಿತರು ನವದಂಪತಿಗೆ ಆಶೀರ್ವದಿಸಿದರು.
ಸಾಮಾಜಿಕ ಜಾಲತಾಣದಲ್ಲಿ ವರನ ಸ್ನೇಹಿತರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದು, “ನನ್ನ ಸ್ನೇಹಿತನ ಮದುವೆ ದಿನವೇ ಭಾರತ – ಪಾಕಿಸ್ತಾನ ಪಂದ್ಯವಿದ್ದ ಕಾರಣ ಪಂದ್ಯದ ನೇರಪ್ರಸಾರ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿತ್ತು. ಮದುವೆಗೆ ಬಂದಿದ್ದ ನಮ್ಮ ಎಲ್ಲಾ ಸ್ನೇಹಿತರು ಪಂದ್ಯದ ನೇರಪ್ರಸಾರ ವೀಕ್ಷಿಸಿ ಖುಷಿಪಟ್ಟರು” ಎಂದು ಬರೆದುಕೊಂಡಿದ್ದಾರೆ.
Comments are closed.