Chikkamagaluru: ಕರ್ತವ್ಯ ಲೋಪ ಆರೋಪ-ಪ್ರಭಾರಿ ಮುಖ್ಯ ಶಿಕ್ಷಕಿ ಅಮಾನತು


Chikkamagaluru: ಪ್ರಭಾರಿ ಮುಖ್ಯ ಶಿಕ್ಷಕಿಯನ್ನು ಕರ್ತವ್ಯ ಲೋಪ ಆರೋಪದ ಮೇಲೆ ಅಮಾನತು ಮಾಡಲಾಗಿದೆ. ಮೂಡಿಗೆರೆ ತಾಲ್ಲೂಕು ಕಿತ್ತಲೆಗಂಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿಯಾಗಿರುವ ಎಚ್‌ಎಸ್ ಶೀಲರಾಣಿ ಅವರನ್ನು ಅಮಾನತು ಮಾಡಲಾಗಿದೆ.


ಮೊಬೈಲ್ ಬಳಕೆ, ಪಠ್ಯ ಚಟುವಟಿಕೆಗಳಲ್ಲಿ ನಿರುತ್ಸಾಹ, ಬಿಸಿಯೂಟ ಯೋಜನೆಯಲ್ಲಿ ಅವ್ಯವಹಾರ, ಲೆಕ್ಕಪತ್ರಗಳ ತಪ್ಪು ನಿರ್ವಹಣೆ ಆರೋಪದ ಮೇಲೆ ಶಿಕ್ಷಕಿ ಮೇಲೆ ಈ ಕ್ರಮ ವಹಿಸಲಾಗಿದೆ.

Comments are closed.