BESCOM: ಗ್ರಾಹಕರಿಂದ ‘ಗೃಹಜ್ಯೋತಿ’ ಹಣ ವಸೂಲಿ ವಿಚಾರ – ಸ್ಪಷ್ಟೀಕರಣ ನೀಡಿದ ಬೆಸ್ಕಾಂ ನಿರ್ದೇಶಕ !!

BESCOM: ಗೃಹ ಜ್ಯೋತಿ ಯೋಜನೆಗೆ ಅನುದಾನ ನೀಡದಿದ್ದರೆ ಗ್ರಾಹಕರಿಂದ ಹಣವಸೂಲಿ ಮಾಡಲಾಗುವುದು ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹೇಳಿಕೆ ನೀಡಿದ್ದು ರಾಜ್ಯಾದ್ಯಂತ ಬಾರಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಈ ಕುರಿತಾಗಿ ಬೆಸ್ಕಾಂ ಎಂಡಿ ಶಿವಶಂಕರ್ ಸ್ಪಷ್ಟೀಕರಣ ನೀಡಿದ್ದಾರೆ.

ಹೌದು ಈ ಕುರಿತು ಬೆಂಗಳೂರಿನಲ್ಲಿ ಬೆಸ್ಕಾಂ ಎಂಡಿ ಶಿವಶಂಕರ್ ಸ್ಪಷ್ಟನೆ ನೀಡಿದ್ದು, ಗೃಹಜ್ಯೋತಿ ಯೋಜನೆಗೆ ಮುಂಗಡ ಅನುದಾನ ನಮಗೆ ನೀಡಲಾಗಿದೆ.ಈ ಯೋಜನೆ ಸಂಬಂಧ ನಮ್ಮಲ್ಲಿ ಮುಂಗಡ 50 ಕೋಟಿ ರೂಪಾಯಿ ಇದೆ. ಸರ್ಕಾರ ಮುಂಗಡ ಹಣ ಕೊಡದೆ ಇದ್ದಲ್ಲಿ ಗ್ರಾಹಕರು ಕೊಡಬೇಕು ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ ತಿಳಿಸಿದ್ದರು. ಇದು ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ಪ್ರತಿಪಕ್ಷಗಳ ಬಾಯಿಗೆ ಆಹಾರ ಕೂಡ ಆಗಿತ್ತು. ಇದೀಗ ಈ ವಿಚಾರವಾಗಿ ಬೆಸ್ಕಾಂ ನಿರ್ದೇಶಕರು ಸ್ಪಷ್ಟೀಕರಣ ನೀಡಿ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್, ಗೃಹ ಜ್ಯೋತಿ ಯೋಜನೆಗೆ ಮುಂಗಡ ಅನುದಾನ ನಮಗೆ ನೀಡಲಾಗಿದೆ. ಈ ಯೋಜನೆ ಸಂಬಂಧ ನಮ್ಮಲ್ಲಿ ಮುಂಗಡ 50 ಕೋಟಿ ರೂ. ಇದೆ. ಸರ್ಕಾರ ಮುಂಗಡ ಹಣ ಕೊಡದೇ ಇದ್ದಲ್ಲಿ ಗ್ರಾಹಕರು ಕೊಡಬೇಕು. ಆದರೆ ಸರ್ಕಾರ ನಮಗೆ ಪ್ರತಿ ತಿಂಗಳೂ ಮುಂಗಡ ಹಣ ಬಿಡುಗಡೆ ಮಾಡುತ್ತಿದೆ. ಹೀಗಾಗಿ ಗ್ರಾಹಕರು ಬಿಲ್ ಪಾವತಿಸಬೇಕಾದ ಪ್ರಮೇಯ ಬರುವುದಿಲ್ಲ. ರಾಜ್ಯ ಸರ್ಕಾರ ಉಚಿತ ಯೋಜನೆಗಳ ಸಬ್ಸಿಡಿ ಹಣ ಕೊಡದೇ ಇದ್ದಲ್ಲಿ, ಕೆಇಆರ್‌ಸಿ ನಿಯಮಗಳ ಪ್ರಕಾರ ನಾವು ಹಣ ವಸೂಲಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಅಲ್ಲದೆ ಸರ್ಕಾರ ನೀಡಿರುವ ಅನುದಾನ ಕುರಿತು ಬೆಸ್ಕಾಂನಿಂದ ಅಂಕಿ ಅಂಶ ರಿಲೀಸ್ ಮಾಡಲಾಗಿದೆ. 2023ರ ಆಗಸ್ಟ್‌ನಿಂದ 2025ರ ಫೆಬ್ರವರಿವರೆಗಿನ ಅನುದಾನ ಕುರಿತ ಮಾಹಿತಿ ನೀಡಲಾಗಿದೆ. ಸರ್ಕಾರಕ್ಕೆ ಸುಮಾರು 6,592 ಕೋಟಿ ರೂಪಾಯಿ ಹಣ ಕೇಳಿದ್ದ ಬೆಸ್ಕಾಂ, 2025ರ ಫೆಬ್ರವರಿವರೆಗೆ ಒಟ್ಟು 6,631 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಸರ್ಕಾರ ಬೆಸ್ಕಾಂಗೆ ಹೆಚ್ಚುವರಿಯಾಗಿ 39 ಕೋಟಿ ರೂಪಾಯಿ ನೀಡಿದೆ ಎಂದು ತಿಳಿಸಲಾಗಿದೆ.
Comments are closed.