ಕಾಫಿ ಮಂಡಳಿಯಿಂದ ಕಾರ್ಯಗಾರ ಮತ್ತು ಮಣ್ಣು ಪರೀಕ್ಷಾ ಅಭಿಯಾನ

Madikeri: ಸುಸ್ಥಿರ ಕಾಫಿ ಕೃಷಿಗೆ ಅನುಸರಿಸಬೇಕಾದ ಉತ್ತಮ ಕೃಷಿ ಪದ್ದತಿಗಳ ಕುರಿತು ಕಾಫಿ ಮಂಡಳಿ ಮತ್ತು ಸುಕ್ಡೇನ್ ಕಾಫಿ ಪ್ರವೇಟ್ ಲಿಮಿಟೆಡ್ ಸಹಯೋಗದೊಂದಿಗೆ ನಿಟ್ಟೂರು ಗ್ರಾಮ ಪಂಚಾಯತ್ ಮತ್ತು ಇಗ್ಗುತ್ತಪ್ಪ ಸಂಘ ಕಾರ್ಮಾಡು ಇವರ ಸಹಯೋಗದಲ್ಲಿ ನಿಟ್ಟೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಕಾರ್ಯಗಾರ ಆಯೋಜಿಸಲಾಗಿತ್ತು. ಗೊಣಿಕೊಪ್ಪಲು ಕಾಪಿಮಂಡಳಿಯ ಉಪನಿರ್ದೆಶಕರಾದ ಡಾ. ಕೆ ಶ್ರೀದೇವಿಯವರು ಅಧ್ಯಕ್ಷತೆ ವಹಿಸಿಕೊಂಡು ಸುಸ್ಥಿರ ಕಾಫಿ ಉತ್ಪಾದನೆಯ ಮಹತ್ವದ ಬಗ್ಗೆ ಮಾತನಾಡಿದರು, ಸಾಂಬರು ಸಂಶೋಧನಾ ಉಪಕೇಂದ್ರ ಅಪ್ಪಂಗಳದ ಹಿರಿಯ ವಿಜ್ಞಾನಿಗಳಾದ ಡಾ. ಅಂಖೇಗೌಡರವರು ಕರಿಮೆಣಸು ಮತ್ತು ಎಲಕ್ಕಿ ಕೃಷಿ ಬೇಸಾಯ ಕ್ರಮಗಳ ಬಗ್ಗೆ ಮತ್ತು ಇತ್ತೀಚಿನ ಹವಮಾನ ಬದಲಾವಣೆಗೆ ತಕ್ಕಂತೆ ಕರಿ ಮೆಣಸು ಮತ್ತು ಎಲಕ್ಕಿ ಕೃಷಿಕರು ಅನುಸರಿಸಬೇಕಾದ ಕೃಷಿ ಪದ್ದತಿಗಳ ವಿಚಾರವಾಗಿ ಮಾಹಿತಿ ನೀಡಿದರು.
ಕಾಫಿ ಸಂಸೋಧನಾ ಉಪಕೇಂದ್ರ ಚೆಟ್ಟಳ್ಳಿಯ ಮಣ್ಣು ವಿಜ್ಞಾನಿಗಳಾದ ಡಾ. ನಧಾಪ್ ರವರು ಮಣ್ಣಿನ ಅರೋಗ್ಯ ಮತ್ತು ಸಮಗ್ರ ಪೋಷಕಾಂಶಗಳ ನಿರ್ವಹಣೆ ಬಗ್ಗೆ ಸಲಹೆಗಳನ್ನು ನೀಡಿದರು. ಗೊಣಿಕೊಪ್ಪಲು ಕಾಪಿ ಮಂಡಳಿಯ ತಳಿ ಅಭಿವೃದ್ಧಿ ಮತ್ತು ಅನುವಂಶೀಯ ಶಾಸ್ತ್ರ ವಿಜ್ಞಾನಿಗಳಾದ ಡಾ. ಚೇತನ್ ಕಂಬ ಚೀಗುರಿನಗಿಡ ಮತ್ತು ಕಾಫಿಯ ಹೊಸ ತಳಿಯ ಪ್ರಾಮುಖ್ಯತೆಯ ಬಗ್ಗೆ ವಿವರಣೆ ನೀಡಿದರು.ಗೊಣಿಕೊಪ್ಪಲು ಕಾಫಿ ಮಂಡಳಿಯ ಸಂಪರ್ಕ ಅಧಿಕಾರಿಗಳಾದ ಡಿ. ಯಸ್ ಮುಖಾರೀಬ್ ವರು ಸ್ವಾಗತಿಸಿ ರೋಬೆಷ್ಟ ಕಾಫಿ ತೋಟದಲ್ಲಿ ನೀರಿನ ಮಹತ್ವ ಮತ್ತು ನೀರಿನ ನಿರ್ವಾಹಣೆಯ ಬಗ್ಗೆ ವಿವರಣೆ ನೀಡಿ ಕಾಫಿ ಮಂಡಳಿಯಿಂದ ಬಿಡುಗಡೆಗೊಳಿಸಲಾಗಿರುವ ಇಂಡಿಯಾ ಕಾಫಿ ಯಾಪ್ ನಲ್ಲಿ ಎಲ್ಲಾ ಕಾಫಿ ಬೆಳೆಗಾರರು ನೊಂದಾಯಿಸಿಕೋಳ್ಳಲು ಕರೆ ನೀಡಿದರು.
ಇಗ್ಗುತ್ತಪ್ಪ ಸಂಘದ ಕಾರ್ಯದರ್ಶಿ ಮುಕ್ಕಾಟಿರ ಪ್ರೀನ್ಸ್ ಗಣಪತಿ ವಂದಿಸಿದರು, ಸುಕ್ಡೇನ್ ಕಾಫಿ ಪ್ರವೈಟ್ ಲಿಮಿಟೆಡ್ ವ್ಯವಸ್ಥಾಪಕಿಯವರಾದ ಪ್ರಕೃತಿ ಪೊನ್ನಮ್ಮ , ನಿಟ್ಟೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಚಕ್ಕೇರ ಸೂರ್ಯ ಅಯ್ಯಪ್ಪ, ಸದಸ್ಯರುಗಳಾದ ಕಾಟಿಮಾಡ ಶರೀನ್ ಮುತ್ತಣ್ಣ, ಪಡಿಞರಂಡ ಕವಿತಾ ಪ್ರಭು, ಇಗ್ಗುತ್ತಪ್ಪ ಸಂಘದ ಅಧ್ಯಕ್ಷರಾದ ಮುಕ್ಕಾಟಿರ ಸೋಮಯ್ಯ, ಪ್ರಮುಖರಾದ ಕೊಟ್ಟಂಗಡ ಮಂಜುನಾಥ್, ಮಾಪಂಗಡ ಯಮುನಾಚಂಗಪ್ಪ, ಪೊರಂಗಡ ಪವನ್ ಚಿಟ್ಟಿಯಪ್ಪ, ಕಳ್ಳೇಂಗಡ ಶಾಂತಉತ್ತಯ್ಯ, ಕಾಟಿಮಾಡ ಶಿವಪ್ಪ ಮುಂತಾದವರು ಹಾಜರಿದ್ದರು ಬಾಳೆಲೆ ಹೊಬಳಿ ವ್ಯಾಪ್ತಿಯ 75 ಅಯ್ದಿ ಕಾಪಿ ಬೆಳೆಗಾರರು ಕಾರ್ಯಗಾರದಲ್ಲಿ ಭಾಗವಹಿಸಿ 44 ಬೆಳೆಗಾರರು ಮಣ್ಣು ಪರೀಕ್ಷೆ ಮಾಡಿಸಿಕೊಂಡರು
Comments are closed.