Ruby Roman Grapes: ರೂಬಿ ರೋಮನ್‌ ದ್ರಾಕ್ಷಿ ಬೆಲೆ ಕೆಜಿ ಗೆ 8 ಲಕ್ಷ!

Share the Article

Ruby Roman Grapes: ಒಂದು ಕೆಜಿ ದ್ರಾಕ್ಷಿ ಬೆಲೆ ಎಷ್ಟಿರಬಹುದು ಅಬ್ಬಬ್ಬ ಅಂದರೆ 80, 100 ರೂ. ಇರಬಹುದೇ? ಅಥವಾ ರೂ.200? ಆದರೆ ನಗರದಲ್ಲಿ ಶಿವರಾತ್ರಿ ಅಂಗವಾಗಿ ಏರ್ಪಡಿಸಿರುವ ಹಣ್ಣುಗಳ ಪ್ರದರ್ಶನದಲ್ಲಿ ಜಗತ್ತಿನ ದುಬಾರಿ ದ್ರಾಕ್ಷಿ ಖ್ಯಾತಿ ʼರೂಬಿ ರೋಮನ್‌ʼ ನತ್ತ ಎಲ್ಲರೂ ಆಶ್ಚರ್ಯದಿಂದ ನೋಡುತ್ತಿದ್ದಾರೆ.

ಜಪಾನ್‌ ತಳಿಯ ಇದು ಕೆಜಿಗೆ ಎಂಟು ಲಕ್ಷ ರೂ. ಬೆಲೆ ಹೊಂದಿದೆ. ಮುಂಬೈ ಮೂಲದ ವ್ಯಾಪಾರಿ ಮೂಲಕ 4 ಲಕ್ಷ ರೂ. ಖರ್ಚು ಮಾಡಿ ಅರ್ಧ ಕೆಜಿ ರೂಬಿ ರೋಮನ್‌ ದ್ರಾಕ್ಷಿ ತರಿಸಿ ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಈ ಹಿಂದೆ ಜಗತ್ತಿನ ದುಬಾರಿ ಮಾವು ಖ್ಯಾತಿಯ ʼಮಿಯಾ ಜಾಕಿʼ ಪ್ರದರ್ಶಿಸಲಾಗಿತ್ತು. ಇದರ ಬೆಲೆ ಕೆಜಿಗೆ 2.5 ಲಕ್ಷ ರೂ. ಇತ್ತು.

Comments are closed.