Chikkaballapura: ಲವರ್ ಬೇರೆ ಹುಡುಗಿ ಜೊತೆ ಚಾಟಿಂಗ್! 17 ವರ್ಷದ ಬಾಲಕಿ ಆತ್ಮಹತ್ಯೆ

Chikkaballapura: 17 ವರ್ಷದ ಬಾಲಕಿ ತನ್ನ ಲವರ್ ಬೇರೆ ಹುಡುಗಿಯೊಂದಿಗೆ ಚಾಟಿಂಗ್ ಮಾಡಿದ್ದಾನೆ ಎನ್ನುವ ಕಾರಣಕ್ಕೆ ಮನನೊಂದು ನೇಣಿಗೆ ಶರಣಾದ ಘಟನೆ ಮಂಚೇನಹಳ್ಳಿ ತಾಲೂಕಿನ ಸಾದೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪುರ ಗ್ರಾಮದ ಫೊಟೋಗ್ರಾಫರನ್ನು ಬಾಲಕಿ ಒಂದು ವರ್ಷದಿಂದ ಪ್ರೀತಿ ಮಾಡುತ್ತಿದ್ದಳು. ಯುವಕ ಇತ್ತೀಚೆಗೆ ಬೇರೊಂದು ಹುಡುಗಿ ಜೊತೆ ಚಾಟಿಂಗ್ ಮಾಡುತ್ತಿದ್ದು, ಆತ್ಮೀಯವಾಗಿದ್ದ ಎಂದು ಆರೋಪಿಸಲಾಗಿದೆ. ಪ್ರಿಯಕರ ಆದರ್ಶನ ಜೊತೆ ಫೆ.23 ರಂದು ಪ್ರೇಯಸಿ ಸುಚಿತ್ರಾ (17) ಜಗಳವಾಡಿದ್ದಾಳೆ. ಇಂದು (ಫೆ.24) ರಂದು
ಬಾಲಕಿ ಮನನೊಂದು ಮನೆಯ ಶೌಚಾಲಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ವರದಿಯಾಗಿದೆ.
ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Comments are closed.