Kodi Shri: ಯುಗಾದಿ ನಂತರ..? ರಾಜ್ಯ ಕಾಂಗ್ರೆಸ್ ಸರ್ಕಾರದ ಕುರಿತು ಸ್ಫೋಟಕ ಭವಿಷ್ಯ ನೋಡಿದ ಕೋಡಿ ಶ್ರೀ !!

Kodi Shri: ರಾಜಕೀಯ ವಿಚಾರ, ನೈಸರ್ಗಿಕ ವಿಚಾರ ಹಾಗೂ ಸಾವು ನೋವು, ಮಳೆ ಮತ್ತು ಪ್ರಕೃತಿ ವಿಕೋಪಗಳ ಆದಿಯಾಗಿ ಅನೇಕ ಸಂಗತಿಗಳ ಕುರಿತು ಭವಿಷ್ಯ ನುಡಿಯುವ ಕೋಡಿ ಮಠದ ಶ್ರೀಗಳು ಇದೀಗ ಸಿಎಂ ಸಿದ್ದರಾಮಯ್ಯ ಅಧಿಕಾರದ ವಿಚಾರವಾಗಿ ಅಚ್ಚರಿ ಭವಿಷ್ಯ ನುಡಿದಿದ್ದಾರೆ.
ಹೌದು, ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಭಾರಿ ಚರ್ಚೆಯಾಗುತ್ತಿದೆ. ರಾಜ್ಯ ನಾಯಕರು ಮುಸುಕಿನ ಗುದ್ದಾಟವನ್ನು ನಡೆಸುತ್ತಿದ್ದಾರೆ. ಬಣಗಳನ್ನು ಮಾಡಿಕೊಂಡು ಕತ್ತಿ ಮಸೆಯುತ್ತಿದ್ದಾರೆ. ಈ ನಡುವೆ ಈ ಎಲ್ಲ ವಿಚಾರಗಳ ಕುರಿತಾಗಿ ಕೋಡಿಮಠದ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಯಾವ ಸಮಸ್ಯೆಗಳು ಸದ್ಯಕ್ಕೆ ಆಗುವ ಲಕ್ಷಣಗಳು ಇಲ್ಲ. ಪ್ರಸ್ತುತ ಯಾವ ತೊಂದರೆ, ಬೆಳವಣಿಗೆಗಳು ಸರ್ಕಾರದ ಮಟ್ಟದಲ್ಲಿ ಆಗಲ್ಲ. ಅಲ್ಲದೆ ಯುಗಾದಿ ಬಳಿಕವೇ ಎಲ್ಲವನ್ನೂ ವಿವರವಾಗಿ ಹೇಳುವೆ ಎಂದು ಶ್ರೀಗಳು ಕುತೂಹಲ ಮೂಡಿಸಿದ್ದಾರೆ.
ಜೊತೆಗೆ ಯುಗಾದಿ ನಂತದಲ್ಲಿ ರಾಜ್ಯದಲ್ಲಿ ಶುಭ ಮತ್ತು ಅಶುಭ ದಿನಗಳೂ ಎದುರಾಗಲಿವೆ. ಈಗ ಸವಿಸ್ತಾರವಾಗಿ ಹೇಳಲ್ಲ. ಅಲ್ಲದೇ ಈ ಬಾರಿ ಬಿಸಿಲು ಹೆಚ್ಚಳವಾಗಲಿದ್ದು, ಅಪಾಯಕಾರಿ ಧಗೆಯಿಂದ ದುಷ್ಪರಿಣಾಮ ಎದುರಾಗುವ ಸಾಧ್ಯತೆ ಹೆಚ್ಚಿದೆ ಎಂದೂ ಪರೋಕ್ಷವಾಗಿ ನುಡಿದಿದ್ದಾರೆ.
Comments are closed.