Shivamogga: ರೌಡಿಶೀಟರ್ ಕಾಲಿಗೆ ಗುಂಡಿಟ್ಟ ಇನ್ಸ್ ಪೆಕ್ಟರ್ ನಾಗಮ್ಮ!

Shivamogga: ಫೆ.21 ರಂದು ಗುಂಡಾ ಅಲಿಯಾಸ್ ರವಿ ಎಂಬಾತನ ಮುಂಗಾಲಿಗೆ ಎಸ್‌ಐ ಕೃಷ್ಣ ಅವರು ಗುಂಡು ಹೊಡೆದಿರುವ ಘಟನೆ ಮಾಸುವ ಮೊದಲೇ ಮತ್ತೊಮ್ಮೆ ಭದ್ರಾವತಿಯಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ಪೇಪರ್ ಟೌನ್ ಪೊಲೀಸ್ ಇನ್ಸ್‌ಪೆಕ್ಟರ್ ನಾಗಮ್ಮ ಅವರು ರೌಡಿಶೀಟರ್‌ಗೆ ಗುಂಡು ಹಾರಿಸಿದ್ದಾರೆ.


12 ಪ್ರಕರಣಗಳಲ್ಲಿ ಬೇಕಾಗಿರುವ ರೌಡಿಶೀಟರ್ ಶಾಹಿದ್ ನನ್ನು ಸೆರೆ ಹಿಡಿಯಲು ಇಂದು ಫೆ.24 (ಸೋಮವಾರ) ತೆರಳಿದ್ದರು. ಈ ವೇಳೆ ನಾಗರಾಜ್ ಎಂಬ ಪೊಲೀಸ್ ಸಿಬ್ಬಂದಿ ಮೇಲೆ ಈತ ಹಲ್ಲೆಗೆ ಮುಂದೆ ಬಂದಿದ್ದು, ಈ ಸಂದರ್ಭದಲ್ಲಿ ಪಿಐ ನಾಗಮ್ಮ ರೌಡಿಶೀಟರ್ ಶಾಹಿದ್ ಕಾಲಿಗೆ ಗುಂಡು ಹಾರಿಸಿ ಆತ ನೆಲಕ್ಕೆ ಬೀಳುವಂತೆ ಮಾಡಿದ್ದಾರೆ.
ನಂತರ ಪೊಲೀಸರು ಶಾಹೀದ್‌ನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪೇಪರ್ ಟೌನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ. ಎಸ್ಪಿ ಮಿಥುನ್ ಕುಮಾರ್ ಈ ಕುರಿತು ಮಾಹಿತಿ ನೀಡಿರುವ ಬಗ್ಗೆ ವರದಿಯಾಗಿದೆ.
Comments are closed.