of your HTML document.

ಅಪ್ಪನ ಕ್ರೇಜಿ ಒಪ್ಪಂದ: ಮಗ ಒಳ್ಳೆ ಕಾಲೇಜ್ ಸೇರಿದ್ರೆ 40% ಸಂಬಳ ಕೊಡ್ತೇನೆ, ಇಲ್ಲಾಂದ್ರೆ ಮಗ ಫುಲ್ ಕೊಡ್ಬೇಕು!

ಪ್ರತೀ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ವಿಶೇಷ ಆಸಕ್ತಿಯನ್ನಿಟ್ಟುಕೊಂಡಿರುತ್ತಾರೆ. ಅದರಲ್ಲೂ ಕೆಲ ತಂದೆ ತಾಯಿಗೆ ಅವರ ಮಕ್ಕಳಿಗೆ ಆ ಕ್ಯಪಾಸಿಟಿ ಇದೆಯೋ ಇಲ್ಲವೋ ಅನ್ನೋದು ಅವರಿಗೆ ಸಂಬಂಧ ಇಲ್ಲದ ವಿಷಯ. ಒಟ್ಟಿನಲ್ಲಿ ತಮ್ಮ ಮಕ್ಕಳು ತಾವು ಅಂದುಕೊಂಡಂತೆ ಡಾಕ್ಟರ್, ಇಂಜಿನಿಯರ್, ಐಎಎಸ್, ಕೆಎಎಸ್ ಅದೇನೆ ಆದ್ರೂ ತಮ್ಮ ಮಕ್ಕಳು ವೈಟ್ ಕಾಲರ್ ಜಾಬ್ ಪಡೆದು ಉನ್ನತ ಹುದ್ದೆಯಲ್ಲಿರಬೇಕು. ಅದೇ ರೀತಿ ಆಸೆ ಪಡುವ ಇಲ್ಲೊಬ್ಬ ತಂದೆ, ಕಾಲೇಜು ಪ್ರವೇಶಕ್ಕೆ ಸಂಬಂಧಿಸಿದಂತೆ ತನ್ನ ಮಗನ ಜೊತೆಗೆ ಹುಚ್ಚು ಒಪ್ಪಂದ ಒಂದನ್ನು ಮಾಡಿಕೊಂಡಿದ್ದಾನೆ. ಈ ತಂದೆ ಮಗನ ಮಧ್ಯೆಗಿನ ವ್ಯವಹಾರಿಕ ಒಪ್ಪಂದದ ಕುರಿತು ತಂದೆ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ತಂದೆಯ ಈ ಹುಚ್ಚು ಒಪ್ಪಂದವನ್ನು ಓದಿದ ಓದುಗರು ನಕ್ಕು ನಗೆಗಡಲಲ್ಲಿ ತೇಲಾಡಿದ್ದಾರೆ.

ಇದು ತಂದೆ ಲಿಖಿತ ಒಪ್ಪಂದ:
ಮಗ IIT, NIT, IIIT, ಅಥವಾ BITS ಅಂತ ಪ್ರತಿಷ್ಠಿತ ಸಂಸ್ಥೆಗಳಿಗೆ ಮುಂದಿನ ಉನ್ನತ ವ್ಯಾಸಂಗಕ್ಕೆ ಸೇರುವಷ್ಟು ಅಂಕ ತೆಗೆದರೆ, ನಿವೃತ್ತಿಯಾಗುವವರೆಗೆ ಪ್ರತಿ ತಿಂಗಳು ಅವನ ತಂದೆಯ ಸಂಬಳದ 40% ಪಡೆಯುತ್ತಾನೆ.

ಆದರೆ ಅವನು ಟೈರ್-2 ಅಥವಾ ಟೈರ್-3 ಕಾಲೇಜಿಗೆ ಸೇರಿದರೆ, ಅವನು ನಿವೃತ್ತಿಯಾಗುವವರೆಗೂ ತನ್ನ ಸ್ವಂತ ಸಂಬಳದ 100% ಅನ್ನು ತನ್ನ ತಂದೆಗೆ ನೀಡಬೇಕು!
ಇದೀಗ ತಂದೆಯ ಹುಚ್ಚು ಒಪ್ಪಂದ ಪೋಸ್ಟ್ ವೈರಲ್ ಆಗಿದೆ. ಕೆಲ ಜನರು ಇದನ್ನು “ಪೀಕ್ ದೇಸಿ ಪೇರೆಂಟಿಂಗ್” ಎಂದು ಹೇಳಿದರೆ, ಇನ್ನಿತರರು ಇದು ಮಕ್ಕಳ ಮೇಲೆ ತುಂಬಾ ಒತ್ತಡ ಹೇರುವ ಒಪ್ಪಂದ ಎಂದು ಹೇಳಿದ್ದಾರೆ. ಮಗನಿಗೆ ಒತ್ತಡ ಹೇರಲು ಈ ಒಪ್ಪಂದ ಮಾಡಲಾಗಿದೆಯೋ ಅಥವಾ, ಸೋಷಿಯಲ್ಸ್’ಗಳ ಒತ್ತಡ ಕಡಿಮೆ ಮಾಡಲು ಇಂಥಹಾ ಒಂದು ಫನ್ನಿ ಒಪ್ಪಂದವನ್ನು ಅಪ್ಪ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ರಾ? ಗೊತ್ತಿಲ್ಲ.

Comments are closed.