Holiday : ಇಂದು ರಾಜ್ಯದ ಈ ಜಿಲ್ಲೆಯ ಶಾಲೆಗಳಿಗೆ ರಜೆಘೋಷಣೆ !!

Share the Article

Holiday : ಕೊಪ್ಪಳ ಜಿಲ್ಲೆ ಬಂದ್ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯಾದ್ಯಂತ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಕೊಪ್ಪಳ ನಗರದ ಬಳಿ ಬಿಎಸ್‌ಪಿಎಲ್ ಕಾರ್ಖಾನೆಯ ನಿರ್ಮಿಸಲು ಯೋಜನೆ ರೂಪುಗೊಳ್ಳುತ್ತಿದ್ದು, ಕಾರ್ಖಾನೆ ನಿರ್ಮಾಣದ ವಿರುದ್ಧ ಮತ್ತು ಪರಿಸರ ರಕ್ಷಣೆಗಾಗಿ ವಿವಿಧ ಸಂಘಟನೆಗಳು ಸೇರಿ ನಾಳೆ ( ಸೋಮವಾರ) ಪ್ರತಿಭಟನೆ ನಡೆಸುತ್ತಿದ್ದು, ಮಕ್ಕಳ ಹಿತದೃಷ್ಠಿಯಿಂದ ಕೊಪ್ಪಳ ತಾಲೂಕಿನ ಎಲ್ಲಾ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ರಜೆ ಘೋಷಿಸಿದ್ದಾರೆ.

ಅಲ್ಲದೆ ಇಂದು ಉಂಟಾಗುವ ಶೈಕ್ಷಣಿಕ ನಷ್ಟವನ್ನು ಮುಂದಿನ ರಜಾ ದಿನವಾದ ಮಾ.2ರ ಭಾನುವಾರದಂದು ಶಾಲೆಗಳನ್ನು ನಡೆಸಿ, ಶೈಕ್ಷಣಿಕ ನಷ್ಟವನ್ನು ಸರಿಪಡಿಸಿಕೊಳ್ಳುವಂತೆ ಶಾಲೆಗಳಿಗೆ ಸೂಚಿಸಲಾಗಿದೆ.

Comments are closed.