Vittla: ವಿಟ್ಲ: ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಮಂಗಳೂರು ಗ್ರಾಮಾಂತರ ಜಿಲ್ಲೆ ಆಶ್ರಯದಲ್ಲಿ ಹಿಂದೂ ಯುವ ಸಮಾವೇಶ

Vittla: ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಮಂಗಳೂರು ಗ್ರಾಮಾಂತರ ಜಿಲ್ಲೆ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜನ್ಮದಿನದ ಪ್ರಯುಕ್ತ ಹಿಂದೂ ಯುವ ಸಮಾವೇಶ ನಡೆಯಿತು. ಜೈನ ಬಸದಿ ಯಿಂದ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ವರೆಗೆ ಮೆರವಣಿಗೆ ಸಾಗಿ ಬಂತು. ಬಳಿಕ ವಿಟ್ಲ (Vittla)ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸಮಾವೇಶ ಸಭೆ ನಡೆಯಿತು.

ಸಭೆಯಲ್ಲಿ ಜಿಲ್ಲಾ ಸಂಯೋಜಕರು ನರಸಿಂಹ ಮಾಣಿ ಪ್ರಸ್ತಾವನೆ ಗೈದರು. ಕೇಶವ ಬಂಗೇರ, ವಿಭಾಗ ಪ್ರಮುಖ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇವರು ದಿಕ್ಕೂಚಿ ಭಾಷಣ ಮಾಡಿದರು.
Comments are closed.