Chhaava: ರಾಜ್ಯದ ಎಲ್ಲಾ ಶಾಸಕರಿಗೆ “ಛಾವಾ” ಸಿನಿಮಾ ತೋರಿಸಲು ನಿರ್ಧರಿಸಿದ ಡಿಸಿಎಂ!

Share the Article

Chhaava Movie: ಛತ್ರಪತಿ ಸಂಭಾಜಿ ಮಹಾರಾಜರ ಜೀವನ ಆಧಾರಿತ “ಛಾವ” ಚಿತ್ರವು (Chhaava Movie) ಜನರ ಹೃದಯ ಮುಟ್ಟಿದೆ. ಇತ್ತೀಚಿಗೆ ದೆಹಲಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಸಿನಿಮಾವನ್ನು ಶ್ಲಾಘಿಸಿದರು. ಇದರ ಬೆನ್ನಲ್ಲೆ ಇದೀಗ ಸರ್ಕಾರ ಹೊಸ ನಿರ್ಧಾರ ಕೈಗೊಂಡಿದೆ.

ಮಾಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಮತ್ತು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಛಾವಾ ಚಿತ್ರವನ್ನು ವೀಕ್ಷಿಸಿದ ನಂತರ, ರಾಜ್ಯದ ಎಲ್ಲಾ ಶಾಸಕರಿಗೆ ಈ ಚಿತ್ರವನ್ನು ತೋರಿಸಲಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.

ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನ ಮಾರ್ಚ್ 3 ರಂದು ಆರಂಭವಾಗಲಿದೆ. ದೆಹಲಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅಜಿತ್ ಪವಾರ್ ಅವರು ಮಾರ್ಚ್ 4 ಮತ್ತು 5 ರಂದು ಸಚಿವಾಲಯದ ಮುಂಭಾಗದಲ್ಲಿರುವ ಸಿನಿಮಾ ಹಾಲ್‌ನಲ್ಲಿ ಎಲ್ಲಾ ಶಾಸಕರಿಗೆ ಈ ಚಿತ್ರವನ್ನು ಪ್ರದರ್ಶಿಸಲಾಗುವುದು ಎಂದು ಹೇಳಿದರು.

Comments are closed.