Yadagiri: ದಲಿತರ ಮಕ್ಕಳ ತಟ್ಟೆ ಶುಚಿಗೆ ನಕಾರ; ಬಿಸಿಯೂಟ ಸ್ಥಗಿತ

Yadagiri: ಸರಕಾರಿ ಶಾಲೆಯ ದಲಿತ ಮಕ್ಕಳು ಬಿಸಿಯೂಟ ಮಾಡಿದ್ದ ತಟ್ಟೆ ತೊಳೆಯಲು ಅಡುಗೆ ಸಹಾಯಕ ಸಿಬ್ಬಂದಿ ನಿರಾಕರಣೆ ಮಾಡಿದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಸಮೀಪದ ಕರಕಳ್ಳಿ ಗ್ರಾಮದಲ್ಲಿ ನಡೆದಿದೆ. ಹೀಗಾಗಿ ಮಧ್ಯಾಹ್ನದ ಬಿಸಿಯೂಟ ಸ್ಥಗಿತಗೊಂಡಿದ್ದು, ಮಕ್ಕಳು ರಾಗಿ ಗಂಜಿ ಕುಡಿದು ಮಕ್ಕಳು ಮನೆಗೆ ತೆರಳಿದ ಘಟನೆಯ ಕುರಿತು ವರದಿಯಾಗಿದೆ.

ಕರಕಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಾನಿಯೋರ್ವರು 200 ಸ್ಟೀಲ್ ತಟ್ಟೆ ನೀಡಿದ್ದು, ದಲಿತ ಮಕ್ಕಳು ಊಟ ಮಾಡಿದ ತಟ್ಟೆ ತೊಳೆಯಲು ಅಡುಗೆ ಸಹಾಯಕಿ ನಿರಾಕರಣೆ ಮಾಡುತ್ತಿದ್ದಾರೆ.
ಈ ಶಾಲೆಯಲ್ಲಿ 1 ರಿಂದ 8 ನೇ ತರಗತಿವರೆಗಿನ ಸುಮಾರು 200 ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಬಿಸಿಯೂಟದ ಅಡುಗೆ ಏನೋ ಮಾಡುವುದು ಸರಿ, ಆದರೆ ಆ ತಟ್ಟೆಯಲ್ಲಿ ಊಟ ಮಾಡಿದ ದಲಿತ ಮಕ್ಕಳ ತಟ್ಟೆ ತೊಳೆಯುವುದಿಲ್ಲ ಎಂದು ಅಡುಗೆ ಸಹಾಯಕಿಯರು ನಿರಾಕರಿಸುತ್ತಿದ್ದಾರೆ.
ಇದು ಈಗ ಅಲ್ಲಿನ ದಲಿತ ವರ್ಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅಡುಗೆ ಮಾಡುವವರು ಉದ್ದೇಶಪೂರ್ವಕವಾಗಿ ರಜೆ ಹಾಕಿ ತೆರಳಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಮಕ್ಕಳಿಗೆ ನಾಲ್ಕೈದು ದಿನಗಳಿಂದ ಮಕ್ಕಳಿಗೆ ಬಿಸಿಯೂಟವೇ ಸ್ಥಗಿತಗೊಂಡಿದೆ. ಮಕ್ಕಳು ಹಸಿದ ಹೊಟ್ಟೆಯಲ್ಲಿ ಇರಬಾರದೆಂದು ದಿನಗೂಲಿ ಆಧಾರದ ಮೇಲೆ ಬೇರೆ ಅಡುಗೆ ಸಿಬ್ಬಂದಿಯನ್ನು ಕರೆಸಿ ಮಕ್ಕಳಿಗೆ ಉಪ್ಪಿಟ್ಟು, ರಾಗಿ ಗಂಜಿ ನೀಡಲಾಗುತ್ತಿರುವ ಕುರಿತು ಮಾಧ್ಯಮವು ವರದಿ ಮಾಡಿದೆ.
Comments are closed.