Goa: ನಾಯಿಯ ವಿಚಾರಕ್ಕೆ ಗಲಾಟೆ – ಮಹಿಳೆಯ ಮೇಲೆ ಕಾರು ಹತ್ತಿಸಿ ಕೊಂದ ಪ್ರವಾಸಿ !!

Share the Article

Goa: ಸಾಕು ನಾಯಿಯ ವಿಚಾರವೊಂದಕ್ಕೆ ಗಲಾಟೆ ನಡೆದಿದ್ದು ಈ ವಿಚಾರ ಕೊಲೆಯಲ್ಲಿ ಅಂತ್ಯವಾಗಿದೆ. ಅಂದರೆ ವ್ಯಕ್ತಿ ಒಬ್ಬ ಮಹಿಳೆಯ ಮೇಲೆ ಕಾರು ಹತ್ತಿಸಿ ಕೊಂದುಬಿಟ್ಟಿದ್ದಾನೆ.

ಹೌದು, ಸಾಕು ನಾಯಿಯ ವಿಚಾರದಲ್ಲಿ ತೀವ್ರ ವಾಗ್ವಾದ ನಡೆದ ಪರಿಣಾಮ ಗೋವಾಗೆ ಪ್ರವಾಸಕ್ಕೆಂದು ಬಂದಿದ್ದ ವ್ಯಕ್ತಿ ಸ್ಥಳೀಯ ಮಹಿಳೆ ಮೇಲೆ ಕಾರು ಹತ್ತಿಸಿ ಬರ್ಬರ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ಹತ್ಯೆ ಆರೋಪದ ಮೇಲೆ ದೆಹಲಿಯ ಪ್ರವಾಸಿಗನನ್ನು ಗೋವಾದಲ್ಲಿ ಬಂಧಿಸಲಾಗಿದೆ.

ಗೋವಾದ ಸ್ಥಳೀಯ ನಿವಾಸಿ ಮಾರಿಯಾ ಫೆಲಿಜ್ ಫೆರ್ನಾಂಡಿಸ್ ಪ್ರವಾಸಿಗರಿಗೆ ನಾಯಿಯನ್ನು ತಮ್ಮ ಮನೆಯಿಂದ ದೂರವಿಡುವಂತೆ ಹೇಳಿದರು. ಈ ವೇಳೆ ಮಾತು ಗಲಾಟೆಗೆ ತಿರುಗಿದ್ದು ಪ್ರವಾಸಿ ಗುಂಪಿನಲ್ಲಿದ್ದ ಓರ್ವ ಮಹಿಳೆ ಫೆರ್ನಾಂಡಿಸ್ ಅವರ ಕೂದಲನ್ನು ಎಳೆದು ಕೆಳಗೆ ಬೀಳಿಸಿದ್ದಾರೆ. ಸ್ವಲ್ಪ ಸಮಯದ ನಂತರ, ಪ್ರವಾಸಿಗರಲ್ಲಿ ಒಬ್ಬರಾದ ದೀಪಕ್ ಬಾತ್ರಾ ಅತಿ ವೇಗದಲ್ಲಿ ಅವರ ಮೇಲೆ ಕಾರು ಚಾಲನೆ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಸಧ್ಯ ಗೋವಾ ಪೊಲೀಸರು ದೀಪಕ್ ಬಾತ್ರಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ಅವರ ವಿರುದ್ಧ ಕೊಲೆ ಆರೋಪ ಹೊರಿಸಿದ್ದಾರೆ.

Comments are closed.