of your HTML document.

Divorce : ಚಹಾಲ್ – ಧನುಶ್ರೀ ವಿಚ್ಛೇದನಕ್ಕೆ ‘ಅದುವೇ’ ಕಾರಣ !!

Divorce: ಟೀಮ್ ಇಂಡಿಯಾ ಆಟಗಾರರ ಡಿವೋರ್ಸ್ ಸರಣಿ ಮುಂದುವರೆಯುತ್ತಲೇ ಇದೆ. ಅಂತೆಯೇ ಯಜುವೇಂದ್ರ ಚಹಾಲ್ ಹಾಗೂ ನಟಿ ಧನುಶ್ರೀ ಅವರ ಡಿವೋರ್ಸ್ ವಿಚಾರ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿತ್ತು. ಇಬ್ಬರು ಅಧಿಕೃತವಾಗಿ ಹೇಳಿರಲಿಲ್ಲ. ಆದರೆ ಈಗ ಡಿವೋರ್ಸ್ ವಿಚಾರ ಅಧಿಕೃತವಾಗಿದ್ದು ಬಾಂಧ್ರಾ ಪ್ಯಾಮಿಲಿ ಕೋರ್ಟ್ ಇಬ್ಬರ ಅರ್ಜಿಯನ್ನು ಪುರಸ್ಕರಿಸಿ, ವಿಚ್ಚೇದನ ಮಂಜೂರು ಮಾಡಿದೆ. ಹಾಗಿದ್ದರೆ ಇವರ ವಿಚ್ಛೇದನಕ್ಕೆ ಕಾರಣವೇನು ಎನ್ನುವುದು ಕುತೂಹಲದ ವಿಚಾರ.

ಅಂದಹಾಗೆ ನ್ಯಾಯಾಧೀಶರು ಧನಶ್ರೀ ಮತ್ತು ಯುಜ್ವೇಂದ್ರ ಅವರಿಗೆ ಪ್ರಶ್ನೆಗಳನ್ನು ಕೇಳಿದಾಗ, ಇಬ್ಬರೂ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನ ಪಡೆಯುತ್ತಿರುವುದಾಗಿ ಹೇಳಿದ್ದಾರೆ. ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಅವರ ವಿಚ್ಛೇದನದ ಅಂತಿಮ ವಿಚಾರಣೆಯ ಮೊದಲು, ನ್ಯಾಯಾಧೀಶರು ಇಬ್ಬರನ್ನೂ ಸಲಹೆಗಾರರ ​​ಬಳಿಗೆ ಕಳುಹಿಸಿದ್ದರು. ಈ ಸಮಾಲೋಚನೆಯು ಸುಮಾರು 45 ನಿಮಿಷಗಳ ಕಾಲ ನಡೆಯಿತು ಎನ್ನಲಾಗಿದೆ.

ಇಷ್ಟು ಮಾತ್ರವಲ್ಲದೆ, ವಿಚ್ಚೇದನಕ್ಕೂ ಮುನ್ನ ಇಬ್ಬರೂ ಕಳೆದ 18 ತಿಂಗಳಿನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ ಎಂದು ಧನಶ್ರೀ ನ್ಯಾಯಾಧೀಶರಿಗೆ ತಿಳಿಸಿದರು. ಪ್ರಶ್ನೋತ್ತರ ಅವಧಿಯ ನಂತರ, ನ್ಯಾಯಾಧೀಶರು ಇಂದಿನಿಂದ ಇಬ್ಬರೂ ಗಂಡ ಹೆಂಡತಿಯರಲ್ಲ ಎಂದು ಘೋಷಿಸಿದರು.

 

ಇನ್ನು ನಾಲ್ಕು ವರ್ಷಗಳ ಹಿಂದೆ ಯಜುವೇಂದ್ರ ಮತ್ತು ಧನಶ್ರೀ ಪ್ರೇಮ ವಿವಾಹವಾಗಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಯುಜ್ವೇಂದ್ರ ಧನಶ್ರೀ 60 ಕೋಟಿ ರೂಪಾಯಿಗಳ ದೊಡ್ಡ ಜೀವನಾಂಶವನ್ನು ಪಾವತಿಸಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಆದರೆ ಇದು ಇನ್ನೂ ದೃಢೀಕರಿಸಲ್ಪಟ್ಟಿಲ್ಲ.

Comments are closed.