Renukaswamy: ಚಿತ್ರದುರ್ಗದ ರೇಣುಕಾಸ್ವಾಮಿ ಪುತ್ರನಿಗೆ ನಾಮಕರಣ; ಹೆಸರೇನು ಗೊತ್ತೇ?

Share the Article

Renukaswamy Son Naming Ceremony: ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ  ರೇಣುಕಾಸ್ವಾಮಿ ಹತ್ಯೆ ಪ್ರಕರಣ ಕುರಿತು ಪೊಲೀಸರು 17 ಮಂದಿ ಆರೋಪಿಗಳನ್ನು ಬಂಧನ ಮಾಡಿದ್ದರು. ದರ್ಶನ್‌ ಆಂಡ್‌ ಗ್ಯಾಂಗ್‌ನ ಮೇಲೆ ಈ ಕೊಲೆ ಆರೋಪವಿದ್ದು, ಇದೀಗ ಇವರುಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಇದೀಗ ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಮನೆಯಲ್ಲಿ ಸಂಭ್ರಮದ ವಾತಾವರಣವೊಂದು ಎದುರಾಗಿದೆ. ಮಗುವಿನ ನಾಮಕರಣದ ಶುಭಕಾರ್ಯ ನಡೆಯುತ್ತಿದೆ. ರೇಣುಕಾಸ್ವಾಮಿ ಮಗುವಿಗೆ 5 ತಿಂಗಳು ತುಂಬಿದ ಹಿನ್ನೆಲೆಯಲ್ಲಿ ತೊಟ್ಟಿಲು ಶಾಸ್ತ್ರ ನಡೆದಿದೆ. ರೇಣುಕಾಸ್ವಾಮಿ ತಂದೆ ಕಾಶಿನಾಥ ಶಿವನಗೌಡ್ರು, ತಾಯಿ ರತ್ನ ಪ್ರಭಾ ಅವರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ.

ರೇಣುಕಾಸ್ವಾಮಿಯ ಮುದ್ದಾದ ಗಂಡು ಮಗುವಿಗೆ ಶಶಿಧರ ಸ್ವಾಮಿ ಎಂದು ನಾಮಕರಣ ಮಾಡಲಾಗಿದೆ. ತಂಗಿ ಸುಚೇತ ರೇಣುಕಾಸ್ವಾಮಿ ಪುತ್ರನಿಗೆ ನಾಮಕರಣ ಮಾಡಿದ್ದಾರೆ. ಮೂರು ಬಾರಿ ಶಶಿಧರ ಸ್ವಾಮಿ ಎಂದು ಮಗುವಿನ ಕಿವಿಯಲ್ಲಿ ಹೇಳಿ ಶಾಸ್ತ್ರ ಮಾಡಿದ್ದಾರೆ.

Comments are closed.