Mandya: ನಾಡ ಬಾಂಬ್‌ ಸ್ಫೋಟ; ವಿದ್ಯಾರ್ಥಿಯ ಅಂಗೈ ಛಿದ್ರ

Share the Article

Mandya: ನಾಡ ಬಾಂಬ್‌ ಸ್ಫೋಟದಿಂದಾಗಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ನಾಗಮಂಗಲ ತಾಲೂಕಿನ ಕಂಬದಹಳ್ಳಿಯ ಆಂಜನೇಯಬೆಟ್ಟದಲ್ಲಿ ನಡೆದಿದೆ. ಈ ಘಟನೆಯಿಂದ ಓರ್ವನ ಅಂಗೈ ಛಿದ್ರವಾಗಿದೆ.

ಹರಿಯಂತ್‌ ಪಾಟೀಲ್‌ ಹಾಗೂ ಪಾರ್ಥ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಜೈನ ಬಸದಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಇವರು ಆಂಜನೇಯ ಬೆಟ್ಟದ ದೇವಸ್ಥಾನದ ಸುತ್ತ ಸ್ವಚ್ಛ ಕಾರ್ಯಕ್ಕಾಗಿ ತೆರಳಿದ್ದರು. ಈ ವೇಳೆ ಕಸದ ರಾಶಿಗೆ ವಿದ್ಯಾರ್ಥಿಗಳು ಕೈ ಹಾಕಿದ್ದು, ಬಾಂಬ್‌ ಸ್ಫೋಟಗೊಂಡಿದೆ. ಓರ್ವ ವಿದ್ಯಾರ್ಥಿಯ ಅಂಗೈ ಛಿದ್ರವಾಗಿದ್ದು, ಇನ್ನೋರ್ವನ ಮುಖಕ್ಕೆ ಗಾಯವಾಗಿದೆ.

ಕಾಡು ಹಂದಿ ಬೇಟೆಗೆಂದು ನಾಡ ಬಾಂಬ್‌ ಇಟ್ಟಿರುವ ಸಾಧ್ಯತೆ ಇದ್ದು, ಅಮಾಯಕ ವಿದ್ಯಾರ್ಥಿಗಳು ಇದರಿಂದ ಗಾಯಗೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಿಂಡಿಗನವಿಲೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Comments are closed.