Women’s Day: ವಿಶ್ವ ಮಹಿಳಾ ದಿನಾಚರಣೆಯಂದು ದೇಶದ ಯಶಸ್ವಿ ನಾರಿಯರಿಗೆ ಮೋದಿ ಗಿಫ್ಟ್

Women’s Day: ಮಾರ್ಚ್ 8 ರಂದು ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮನ್ ಕಿ ಬಾತ್‌ನಲ್ಲಿ ವಿಶ್ವಮಹಿಳಾ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ಯಶಸ್ವಿ ಮಹಿಳೆಯರಿಗೆ ಬಿಗ್ ಗುಡ್ ನ್ಯೂಸ್ ಜೊತೆಗೆ ಗಿಫ್ಟ್ ನೀಡಿದ್ದಾರೆ. ತಮ್ಮ ವಿವಿಧ ಸೋಷಿಯಲ್ ಮೀಡಿಯಾಗಳನ್ನು ಹ್ಯಾಂಡಲ್ ಮಾಡಲು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಬಿಟ್ಟುಕೊಡುವುದಾಗಿ ಹೇಳಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ ಮಹಿಳೆಯರು ತಮ್ಮ ಅನುಭವವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಿಂದ ಜನರಿಗೆ ತಿಳಿಸಬಹುದು ಎಂದು ಮೋದಿ ಹೇಳಿದ್ದು, ಈ ಮೂಲಕ ಮಹಿಳೆಯರ ಅದಮ್ಯ ಚೇತನವನ್ನು ಸಂಭ್ರಮ ಮಾಡೋಣ, ಇದರಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ಭಾಗಿಯಾಗಿ ಎಂದು ಕೇಳಿಕೊಂಡಿದ್ದಾರೆ.
ಮಾ.8 ರಂದು ಮೋದಿಯವರ ಸೋಷಿಯಲ್ ಮೀಡಿಯಾಗಳಾದ ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ಇನ್ಸ್‌ಸ್ಟಾಗ್ರಾಂ ಇವೆಲ್ಲವನ್ನು ಮಹಿಳೆಯರೇ ಹ್ಯಾಂಡಲ್ ಮಾಡುವಂತೆ ಹೇಳಿಕೊಂಡಿದ್ದಾರೆ.
Comments are closed.