Viral Video : ಲಿಪ್ಸ್ಟಿಕ್ ಹಚ್ಚಿಕೊಂಡು ಟಾಯ್ಲೆಟ್ ಕನ್ನಡಿಗ ಡೈಲಿ ಮುತ್ತಿಕ್ಕುತ್ತಿದ್ದ ಹುಡುಗಿಯರು – ತಾಳ್ಮೆ ಕಳೆದುಕೊಂಡ ಕ್ಲೀನರ್ ಮಾಡಿದ್ದೇನು ಗೊತ್ತಾ?

Share the Article

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲವೊಂದು ವಿಡಿಯೋಗಳು ನಮಗೆ ಪಾಠವಾಗಲೂ ಬಹುದು. ಅಂತೆಯೇ ಇದೀಗ ಸುಮಾರು ಎಂಟು ವರ್ಷಗಳ ಹಳೆಯದಾದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲಾಗುತ್ತಿದೆ. ಆದರೆ ಇದರ ಹಿಂದಿನ ವಿಚಾರವನ್ನು ನೀವು ತಿಳಿದರೆ ಖಂಡಿತ ನಿಮಗೂ ಕೂಡ ಇಲ್ಲಿ ನಡೆದಿದೆಲ್ಲವೂ ಸರಿ ಎನಿಸುತ್ತದೆ.

 

View this post on Instagram

 

A post shared by Punjab Beyond (@punjabbeyond)

ಅದೇನೆಂದರೆ ಈ ವಿಡಿಯೋದಲ್ಲಿ ಕಾಲೇಜು ಹುಡುಗಿಯರು ಎಷ್ಟು ಹೇಳಿದರೂ ಕೇಳದೇ ತುಟಿಗೆ ದಪ್ಪನೇ ಲಿಫ್ಟಿಕ್ ಬಳಿದು ಕಾಲೇಜು ವಾಶ್‌ರೂಮ್‌ನ ಕನ್ನಡಿಗೆ ಮುತ್ತಿಕ್ಕಿ ಬರುತ್ತಾರೆ. ಇದರಿಂದ ಟಾಯ್ಲೆಟ್ ವಾಶ್‌ರೂಮ್ ಕ್ಲೀನ್ ಮಾಡುವ ವ್ಯಕ್ತಿಗೆ ಈ ಅಂಟಿನಂತಿರುವ ಲಿಪ್‌ಸ್ಟಿಕನ್ನು ತೆಗೆದು ಸ್ವಚ್ಛ ಮಾಡಲು ಅರ್ಧ ಗಂಟೆ ಹೆಚ್ಚೆ ಸಮಯ ತಗುಲುತ್ತಿತ್ತು. ಹೀಗಾಗಿ ಆತ ಈ ಬಗ್ಗೆ ಕಾಲೇಜು ಪ್ರಿನ್ಸ್‌ಪಾಲ್‌ಗೂ ಈ ಬಗ್ಗೆ ದೂರು ನೀಡ್ತಾರೆ. ಆದರೆ ಕಾಲೇಜು ದ್ಯಾರ್ಥಿನಿಯರ ಈ ವರ್ತನೆ ಮುಂದುವರೆದಿತ್ತು. ಪ್ರಿನ್ಸಿಪಾಲರೇ ಕರೆದು ವಾರ್ನ್ ಮಾಡಿದ್ರೂ ಕೇಳದ ಈ ಮಕ್ಕಳ ಹಾವಳಿಗೆ ಬುದ್ಧಿ ಕಲಿಸಲು ಸ್ವತಃ ಕ್ಲೀನರ್‌ ಒಂದು ನಿರ್ಧಾರಕ್ಕೆ ಬರುತ್ತಾನೆ.

ಪ್ರಾಂಶುಪಾಲರೆದುರೇ ಕಾಲೇಜು ವಿದ್ಯಾರ್ಥಿಗಳನ್ನು ವಾಶ್‌ರೂಮ್‌ಗೆ ಕರೆಸಿ ಈ ರೀತಿ ನೀವು ಲಿಪ್ಸ್ಟಿಕ್ ಹಾಕಿ ಕನ್ನಡಿಗೆ ಮುತ್ತಿಕ್ಕುವುದರಿಂದ ಅದನ್ನು ಸ್ವಚ್ಛ ಮಾಡಲು ತನಗೆ ಅರ್ಧ ಗಂಟೆ ಹೆಚ್ಚು ಸಮಯ ಬೇಕು ನಾನು ಪ್ರತಿದಿನ ಲೇಟಾಗಿ ಕೆಲಸದಿಂದ ಮನೆಗೆ ಹೋಗಬೇಕಾಗುತ್ತದೆ ಎಂದು ಹೇಳಿದ ಕ್ಲೀನರ್ ಈ ವಿದ್ಯಾರ್ಥಿನಿಯರಿಗೆ ತಾನು ಹೇಗೆ ಈ ಲಿಫ್ಸ್ಟಿಕ್ ತುಂಬಿದ ಕನ್ನಡಿಯನ್ನು ಕ್ಲೀನ್ ಮಾಡುವೆ ಎಂಬುದರ ಪ್ರಾತ್ಯಕ್ಷಿಕೆ ತೋರಿಸಲು ಮುಂದಾಗುತ್ತಾರೆ. ಕ್ಲೀನ್ ಮಾಡುವ ಬ್ರಶನ್ನು ಸೀದಾ ಟಾಯ್ಲೆಟ್‌ ಕಾಮೋಡ್‌ಗೆ ಅದ್ದಿದ ಆತ ಸೀದಾ ತೆಗೆದುಕೊಂಡು ಬಂದು ಲಿಪ್ಸ್ಟಿಕ್‌ ತುಂಬಿದ ಕನ್ನಡಿಯನ್ನು ಸ್ವಚ್ಚಗೊಳಿಸುತ್ತಾನೆ. ಇದನ್ನು ನೋಡಿದ ವಿದ್ಯಾರ್ಥಿನಿಯರು ಬಾಯಿಗೆ ಕೈ ಹಿಡಿದು ಅಲ್ಲಿಂದ ಓಡುತ್ತಾರೆ….! ಒಟ್ಟಿನಲ್ಲಿ ಈ ವಿಡಿಯೋದಲ್ಲಿ ಕ್ಲೀನರ್ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.

Comments are closed.