Bengaluru : ಪ್ರೀತಿ ನಿರಾಕರಿಸಿದ ಹುಡುಗಿ – ರೊಚ್ಚಿಗೆದ್ದು ಹುಡುಗಿ ತಂದೆಯ ಕಾರು, ಬೈಕಿಗೆ ಬೆಂಕಿ ಇಟ್ಟ ಪಾಗಲ್ ಪ್ರೇಮಿ !!

Bengaluru : ಹುಡುಗಿ ಒಬ್ಬಳು ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕೆ ಪಾಗಲ್ ಪ್ರೇಮಿ ಒಬ್ಬ ಹುಡುಗಿಯ ತಂದೆಯ ಕಾರಿಗೆ ಮತ್ತು ಬೈಕಿಗೆ ಬೆಂಕಿ ಇಟ್ಟಿರುವಂತಹ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಚೆನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಯುವತಿಯೊಬ್ಬಳನ್ನು ಪಾಗಲ್ ಪ್ರೇಮಿ ರಾಹುಲ್ ಪ್ರೀತಿಸುತ್ತಿದ್ದ. ಪ್ರೀತಿ ನಿರಾಕರಿಸಿದಕ್ಕೆ ರೊಚ್ಚಿಗೆದ್ದು ಕಾರು ಮತ್ತು ಬೈಕುಗಳಿಗೆ ರಾಹುಲ್ ಬೆಂಕಿ ಹಾಕಿದ್ದಾನೆ. ಸ್ನೇಹಿತರನ್ನು ಕರೆದುಕೊಂಡು ಹೋಗಿ ರಾಹುಲ್ ಈ ಕೃತ್ಯ ಎಸಗಿದ್ದಾನೆ. ಈ ವೇಳೆ ತಡೆಯಲು ಬಂದ ಸೆಕ್ಯೂರಿಟಿ ಗಾರ್ಡ್ ಮೇಲು ಕೂಡ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಘಟನೆ ಕುರಿತು ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.