Davanagere : ಚರ್ಚಿನಲ್ಲಿ ಭಕ್ತರ ನಡುವೆ ಮಾರಾಮಾರಿ – ಲೆಕ್ಕಪತ್ರ ನೀಡದ್ದಕ್ಕೆ ಫಾದರ್ ಮೇಲೆ ಆಕ್ರೋಶ!!

Share the Article

Davangere : ದಾವಣಗೆರೆ ಜಿಲ್ಲೆಯ ಹರಿಹರದ ಚರ್ಚ್ ಒಂದರಲ್ಲಿ ಭಕ್ತರ ನಡುವೆ ಮಾರಮಾರಿ ಏರ್ಪಟ್ಟಿದ್ದು ಲೆಕ್ಕಪತ್ರ ನೀಡದ ಕಾರಣಕ್ಕೆ ಫಾದರ್ ವಿರುದ್ಧವೂ ಕೂಡ ಆಕ್ರೋಶ ವ್ಯಕ್ತವಾಗಿದೆ.

ಹರಿಹರದ ಚರ್ಚ್ ಒಂದರಲ್ಲಿ ಕೆಲವು ಭಕ್ತರು ಚರ್ಚ್ ನ ಲೆಕ್ಕಪತ್ರ ಕೇಳಿದ್ದರು, ಚರ್ಚ್‌ನ ಫಾದರ್ ಕೆ ಎ ಜಾರ್ಜ್ (Father K J George) ಅವರು, ಲೆಕ್ಕಪತ್ರ ಕೊಡದೆ ಸತಾಯಿಸಿದ್ದರಿಂದ ಚರ್ಚ್‌ಗೆ ನುಗ್ಗಿದ ಭಕ್ತರು ಚರ್ಚ್‌ ಆವರಣದಕ್ಕೇ ಗಲಾಟೆ ಮಾಡಿಕೊಂಡು ಹೊಡೆದಾಟ ನಡೆಸಿರುವ ಘಟನೆ ನಡೆದಿದೆ.

ಇನ್ನು ಹಲವು ಭಾರಿ ಮನವಿ ನೀಡಿದರು ಲೆಕ್ಕಪತ್ರ ಕೊಟ್ಟಿಲ್ಲ ಎಂದು ಆರೋಪಿಸಿ ಬಿಷಪ್ ಫ್ರಾನ್ಸಿಸ್ ಗೆ ಭಕ್ತರು ಘೆರಾವ್ ಹಾಕಿದ್ದಾರೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ಎರಡು ಗುಂಪುಗಳು ಗಲಾಟೆ ವಿಕೋಪಕ್ಕೆ ತೆರಳಿದೆ. ಪ್ರಕರಣ ಸಂಬಂಧ ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.