Telangana: ಹೃದಯ ತುಂಬಿ ಕನ್ಯಾದಾನ ಮಾಡಿದ ನಂತರ ತಂದೆಗೆ ಹೃದಯಾಘಾತ

Telangana: ಮಗಳ ಮದುವೆ ನಡೆಯುವ ಸಮಯದಲ್ಲೇ ತಂದೆ ಹೃದಯಾಘಾತದಿಂದ ಸಾವಿಗೀಡಾದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮಗಳ ಮದುವೆಯ ಸಂಭ್ರಮದಲ್ಲಿ ಖುಷಿಯಿಂದ ಓಡಾಡುತ್ತಿದ್ದ ಅಪ್ಪ, ಮಗಳ ಮದುವೆ ದಿನವೇ ತನ್ನ ಎಲ್ಲಾ ಜವಾಬ್ದಾರಿಯನ್ನು ಮುಗಿಸಿ ಹೃದಯಾಘಾತದಿಂದ ಸಾವು ಕಂಡಿದ್ದಾರೆ.

ಬಾಲಚಂದ್ರಂ (56) ಎಂಬುವವರೇ ಮೃತ ವ್ಯಕ್ತಿ. ಮದುವೆ ಮಂಟಪದಲ್ಲಿ ಮದುವೆ ಮುಗಿದಾಗ ಕುಸಿದು ಬಿದ್ದಿದ್ದ ಇವರನ್ನು ಕೂಡಲೇ ಕಾಮರೆಡ್ಡಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಲ್ಲಿ ವೈದ್ಯರು ಇವರು ಮೃತಪಟ್ಟಿರುವುದಾಗಿ ಘೋಷಣೆ ಮಾಡಿದರು. ತಮ್ಮ ಹಿರಿಯ ಮಗಳು ಕನಕ ಮಹಾಲಕ್ಷ್ಮಿಯ ವಿವಾಹವು ಬೆಂಗಳೂರಿನ ರಾಘವೇಂದ್ರ ಅವರೊಂದಿಗೆ ನಡೆತ್ತಿದ್ದ ಸಂದರ್ಭದಲ್ಲಿ ಕನ್ಯಾದಾನದ ನಂತರ ಇದ್ದಕ್ಕಿಂತೆ ಕುಸಿದು ಬಿದ್ದಿದ್ದು ವೈದ್ಯರು ಪರೀಕ್ಷೆ ಮಾಡಿದಾಗ ಅವರು ಸ್ಥಳದಲ್ಲೇ ಮೃತ ಹೊಂದಿದ್ದಾರೆ ಎಂದು ಹೇಳಿದರು.
Comments are closed.