Sudeep: CCL ಮ್ಯಾಚ್ ವೇಳೆ ಮೈದಾನದಲ್ಲಿ ಎದುರಾಳಿ ವಿರುದ್ಧ ರೊಚ್ಚಿಗೆದ್ದ ಕಿಚ್ಚ – ಸಮಾಧಾನಿಸಲು ಮೈದಾನಕ್ಕೆ ನುಗ್ಗಿದ ಕರ್ನಾಟಕ ಬುಲ್ಡೋಜರ್ಸ್ ಇಡೀ ಟೀಮ್ !

Sudeep: ಸಿಸಿಎಲ್ ಪಂದ್ಯವು ಅದ್ದೂರಿಯಾಗಿ ನಡೆಯುತ್ತಿದೆ. ಸೆಲೆಬ್ರಿಟಿಗಳೆಲ್ಲರೂ ಕೂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಿಚ್ಚ ಸುದೀಪ್ ಅವರು ತಂಡದ ನಾಯಕರಾಗಿರುವುದು ನಮಗೆಲ್ಲ ತಿಳಿದೇ ಇದೆ. ಆದರೆ ಈಗ ಸುದೀಪ್ ಅವರು ಸಿಸಿಎಲ್ ಪಂದ್ಯದ ವೇಳೆ ಎದುರಾಳಿ ತಂಡದ ಜೊತೆ ವಾಗ್ವಾದಕ್ಕೆ ಇಳಿದ ಘಟನೆ ನಡೆದಿದೆ.
ಹೌದು, ಪಂಜಾಬ್ ದೆ ಶೇರ್ ಹಾಗೂ ಕರ್ನಾಟಕ ಬುಲ್ಡೋಜರ್ಸ್ ಮಧ್ಯೆ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ಕರ್ನಾಟಕ ತಂಡ ಕೇವಲ 2 ರನ್ಗಳ ಅಂತರದಲ್ಲಿ ಸೋತಿದೆ. ಈ ರೋಚಕ ಪಂದ್ಯದಲ್ಲಿ ಪಂಜಾಬ್ ಪರ ಬ್ಯಾಟಿಂಗ್ ಮಾಡುತ್ತಿದ್ದ ನಿಂಜಾ ಎನ್ಜೆ ಹಾಗೂ ಕೀಪರ್ ಸುದೀಪ್ ಮಧ್ಯೆ ಕಿರಿಕ್ ಆಗಿದೆ.
ಈ ವೇಳೆ ಸುದೀಪ್ ಅವರನ್ನು ಸಮಾಧಾನ ಮಾಡಲು ಕರ್ನಾಟಕ ಬುಲ್ಡೋಜರ್ಸ್ನ ಇಡೀ ತಂಡವೇ ಬರಬೇಕಾಯಿತು. ರೇಗಾಡುತ್ತಾ ಬಂದ ನಿಂಜಾಗೆ ಸುದೀಪ್ ಅವರು ಮಾತಿನ ಚಾಟಿ ಬೀಸಿದ್ದಾರೆ. ಆ ಬಳಿಕ ಇಡೀ ಕರ್ನಾಟಕ ತಂಡ ಒಗ್ಗಟ್ಟಿನಿಂದ ನಿಂಜಾ ವಿರುದ್ಧ ಮಾತಿಗೆ ಇಳಿದಿದೆ. ಬಳಿಕ ಎಲ್ಲವೂ ತಣ್ಣಗಾದ ನಂತರ ಪಂದ್ಯ ಮುಗಿದ ವೇಳೆ ಸುದೀಪ್ ನಿಂಜಾಗೆ ಶೇಕ್ ಹ್ಯಾಂಡ್ ಮಾಡಿದ್ದಾರೆ.
Comments are closed.