ಪ್ರೀತಿಸುತ್ತಿದ್ದ ಹುಡುಗಿ ಕೈಕೊಟ್ಟ ಸಿಟ್ಟು; ಗಂಡನಿಗೆ ಇರಿದು ಹತ್ಯೆ ಮಾಡಿದ ಪ್ರೇಮಿ – ಕೆಎಸ್‌ಆರ್‌ಟಿಸಿ ಬಸ್‌ನಲ್ಲೇ ಹತ್ಯೆ

Share the Article

karawara : ಕಳೆದ ಹತ್ತು ವರ್ಷದಿಂದ ಪ್ರೀತಿಸುತ್ತಿದ್ದ ಹುಡುಗಿ ಕೈಕೊಟ್ಟ ಸಿಟ್ಟಿಗೆ ಆಕೆಯ ಗಂಡನನ್ನು ಬಸ್‌ನಲ್ಲಿ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಬೆಂಗಳೂರಿಗೆ ಸಂಚರಿಸುತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲೇ ಚಾಕು ಇರಿದು ಕೊಲೆ ಮಾಡಲಾಗಿದೆ.

ಸಾಗರ ತಾಲೂಕಿನ ನೀಚಡಿಯ ಗಂಗಾಧರ್ ಹತ್ಯೆಯಾಗಿದ್ದು, ಪ್ರೀತಮ್ ಡಿಸೋಜ ಚಾಕು ಇರಿದು ಪರಾರಿಯಾಗಿದ್ದಾನೆ. ಕಳೆದ ಹತ್ತು ವರ್ಷದಿಂದ ಶಿರಸಿಯ ಮಹಿಳೆ ಮತ್ತು ಪ್ರೀತಮ್ ಡಿಸೋಜ ಪರಸ್ಪರ ಪ್ರೀತಿಸುತಿದ್ದರು. ಆದರೆ ಆಕೆ ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋದ ಬಳಿಕ ಬದಲಾಗಿದ್ದು, ಅಲ್ಲಿ ಪರಿಚಯವಾದ ಸಾಗರದ ಗಂಗಾಧರ್‌ ಎಂಬಾತನನ್ನು 4 ತಿಂಗಳ ಹಿಂದೆ ವಿವಾಹವಾಗಿದ್ದಳು.

ಇದೀಗ ಪತ್ನಿಯ ಸಂಬಂಧಿಕರ ಕಾರ್ಯಕ್ರಮಕ್ಕೆ ಪತ್ನಿಯೊಂದಿಗೆ ಬಂದಿದ್ದ ಗಂಗಾಧರ್ ಇಂದು ರಾತ್ರಿ ಬೆಂಗಳೂರಿಗೆ ಬಸ್‌ನಲ್ಲಿ ತೆರಳುತ್ತಿದ್ದ. ಪ್ರೀತಮ್ ಕೂಡ ಬಸ್‌ ಹತ್ತಿದ್ದು, ಏಕಾಏಕಿ ಗಂಗಾಧರ್‌ ಜತೆ ಕ್ಯಾತೆ ತೆಗೆದು ಆತನ ಹೃದಯಕ್ಕೇ ಭಾಗಕ್ಕೆ ಚುಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಗಂಗಾಧರ್ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

Comments are closed.