Udupi: ಪರ್ಕಳದಲ್ಲಿ ಭೀಕರ ಅಪಘಾತ, ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು!

Share the Article

Udupi: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರೊಂದು ಢಿಕ್ಕಿ ಹೊಡೆದು ಅವರು ರಸ್ತೆಯಲ್ಲೇ ಕೊನೆಯುಸಿರೆಳೆದ ಹೃದಯವಿದ್ರಾವಕ ಘಟನೆ ಉಡುಪಿ (Udupi) ಜಿಲ್ಲೆಯ ಪರ್ಕಳ ಪೇಟೆಯ ಬಡಗುತಿಟ್ಟು ತಿರುವು ರಸ್ತೆಯಲ್ಲಿ ಇಂದು ನಡೆದಿದೆ.

ಶೇಡಿಗುಡ್ಡೆ ನಿವಾಸಿ ರಮೇಶ್ ನಾಯಕ್ ಇವರು ಕಾರಿನಿಂದ ಇಳಿದು ಬೀಡ ತೆಗೆದುಕೊಳ್ಳಲು ಪಕ್ಕದ ರಸ್ತೆಯಲ್ಲಿರುವ ಅಂಗಡಿಗೆ ಹೋಗಲು ರಸ್ತೆ ದಾಟುತ್ತಿದ್ದಾಗ ಅಚಾನಕ್ ಆಗಿ ಆಚೆಯಿಂದ ಬಂದ ಕಾರೊಂದು ಅವರಿಗೆ ಢಿಕ್ಕಿ ಹೊಡೆದಿದೆ. ಅದರ ರಭಸಕ್ಕೆ ಅವರನ್ನು ಕಾರು ದೂರ ಎಳೆದುಕೊಂಡು ಹೋಗಿದ್ದು, ಪರಿಣಾಮ ಇವರು ಸಾವನ್ನಪ್ಪಿದ್ದಾರೆ.

Comments are closed.