Chhaava: `ಛಾವಾ’ ಚಿತ್ರಕ್ಕೆ ಸಂಭಾವನೆಯೂ ಪಡೆಯದೆ ಸಂಭಾಷಣೆ ಬರೆದದ್ದು ಮುಸ್ಲಿಂ ಬರಹಗಾರ!

Share the Article

Chhaava: ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸಿರುವ ಛಾವಾ (Chhaava) ಚಿತ್ರ ಈಗಾಗಲೇ ಬಹುದೊಡ್ಡ ಮೊತ್ತದ ಗಳಿಕೆಯ ಜೊತೆಗೆ ಯಶಸ್ವಿಯಾಗಿ ಓಡುತ್ತಿದೆ. ಈ ಹಿಸ್ಟೋರಿಕಲ್ ಮೂವಿ ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ. ಈ ಚಿತ್ರದಲ್ಲಿ ನಟ ವಿಕ್ಕಿ ಅವರ ನಟನೆ ಮತ್ತು ಡೈಲಾಗ್ ಅದ್ಭುತವಾಗಿದೆ. ಸಂಭಾಜಿ ಮಹಾರಾಜರ ಪಾತ್ರಕ್ಕೆ ವಿಕ್ಕಿ ಅವರು ಸಂಪೂರ್ಣ ನ್ಯಾಯವನ್ನು ಒದಗಿಸಿದ್ದಾರೆ ಎಂದೇ ಹೇಳಬಹುದು.

ಇನ್ನು ಈ ಸಿನಿಮಾದಲ್ಲಿ ಪ್ರೇಕ್ಷಕರ ಮನಗೆದ್ದ ವಿಚಾರವೆಂದರೆ ಸಂಭಾಷಣೆ. ಮನ ಮುಟ್ಟುವ ಸಂಭಾಷಣೆಗೆ ಪೆನ್ನು ಹಿಡಿದದ್ದು ಮಾತ್ರ ಓರ್ವ ಮುಸ್ಲಿಂ ಬರಹಗಾರ. ಅಚ್ಚರಿಯಾದರೂ ಸತ್ಯ. ಮನಕ್ಕೆ ತಲುಪುವಂತಹ ದಿ ಗ್ರೇಟ್ ಡೈಲಾಗ್ ಗಳನ್ನು ಈ ಸಿನಿಮಾದಲ್ಲಿ ಹೆಣೆದದ್ದು ಇರ್ಷಾದ್ ಕಾಮಿಲ್. ಇವರು ಸಂದರ್ಶನವೊಂದರಲ್ಲಿ ಮಾತನಾಡುತ್ತ ಈ ಸಿನಿಮಾದ ಸಂಭಾಷಣೆ ಬರೆಯಲು ನಾನು ಯಾವುದೇ ರೀತಿಯಲ್ಲಿ ಒಂದು ರೂಪಾಯಿ ಸಂಭಾವನೆಯನ್ನೂ ಪಡೆದಿಲ್ಲ. ಸಂಭಾಜಿ ಮಹಾರಾಜ್ ನನಗೆ ಕೇವಲ ಇತಿಹಾಸದಲ್ಲಿ ಬಂದು ಹೋದ ವ್ಯಕ್ತಿ ಮಾತ್ರವಲ್ಲ. ಆದರ್ಶವೂ ಹೌದು ಎಂದು ಹೇಳಿದ್ದಾರೆ.

Comments are closed.