Telangana: ತೆಲಂಗಾಣದ ನಾಗರ್‌ಕರ್ನೂಲ್‌ನಲ್ಲಿ ಸುರಂಗ ಕುಸಿತ; 42 ಕಾರ್ಮಿಕರ ರಕ್ಷಣೆ, ಎಂಟು ಕಾರ್ಮಿಕರು ನಾಪತ್ತೆ

Telangana: ಶ್ರೀಶೈಲಂ ನ ಎಡದಂಡೆ ಕಾಲುವೆಯ ಕಾಮಗಾರಿ ನಡೆಯುತ್ತಿದ್ದು, ಅನೇಕ ಕಾರ್ಮಿಕರು ಒಳಗಡೆ ಕೆಲಸ ಮಾಡುತ್ತಿದ್ದರು. ಸುರಂಗ ಕಾಲುವೆಯ ನಿರ್ಮಾಣ ಮಾಡುತ್ತಿರುವುದರಿಂದ ಮೇಲ್ಛಾವಣಿ ಕುಸಿದು ಬಿದ್ದಿದೆ. ಪರಿಣಾಮ ಮಣ್ಣು ಮತ್ತು ನೀರು ಸುರಂಗದೊಳಗೆ ಬಂದಿದೆ. ಇವತ್ತು ಹೆಚ್ಚು ಕಾರ್ಮಿಕರು ಸುರಂಗದೊಳಗೆ ಸಿಕ್ಕಾಕಿಕೊಂಡಿದ್ದರು. ಈಗ 42 ಕಾರ್ಮಿಕರನ್ನು ಹೊರಗಡೆ ತೆಗೆಯಲಾಗಿದೆ. ಎಂಟು ಕಾರ್ಮಿಕರು ನಾಪತ್ತೆಯಾಗಿದ್ದು, ಹುಡುಕಾಟ ನಡೆಯುತ್ತಿದೆ.
ಮಣ್ಣು ಮತ್ತು ನೀರು ಒಳಗೆ ಇರುವುದರಿಂದ ಅದನ್ನು ಹೊರಕ್ಕೆ ತೆಗೆಯುವ ಕೆಲಸ ನಡೆಯುತ್ತಿದೆ. ನೀರಾವರಿ ಸಚಿವ ಉತ್ತಮ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿದ್ದು, ಕಾರ್ಯಾಚರಣೆ ವೀಕ್ಷಣೆ, ಮತ್ತು ಪರಿಸ್ಥಿತಿ ಅವಲೋಕನ ಮಾಡುತ್ತಿದ್ದಾರೆ. ರಾಜ್ಯಸರಕಾರ, ಮತ್ತು ಎನ್‌ಡಿಆರ್‌ಎಫ್ ಕೂಡಾ ಸಹಾಯ ಮಾಡುತ್ತಿದೆ. ಮೂರು ಮೀಟರ್‌ನಷ್ಟು ಮಣ್ಣು ಕುಸಿದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಾಣೆಯಾದ ಕಾರ್ಮಿಕರನ್ನು ಪತ್ತೆ ಹಚ್ಚಬೇಕು ಮತ್ತು ಸುರಕ್ಷಿತವಾಗಿ ಹೊರಗಡೆ ತರಬೇಕೆನ್ನುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ.
Comments are closed.