Chikkaballapura: ದೇವಸ್ಥಾನದ ಹುಂಡಿಗೆ ಕನ್ನ ಹಾಕಿದ ಕಳ್ಳ

Share the Article

Chikkaballapura: ಬಾಗೇಪಲ್ಲಿ ಪಟ್ಟಣದ ಹೃದಯ ಭಾಗದಲ್ಲಿರುವ ಮುಜರಾಯಿ ಇಲಾಖೆಗೆ ಸೇರಿದ ಶ್ರೀ ಬೈಲಾಂಜನೇಯಸ್ವಾಮಿ ದೇವಾಲಯ ಮತ್ತು ಶ್ರೀ ಅಯ್ಯಪ್ಪ ದೇವಾಲಯದಲ್ಲಿ ಕಳ್ಳರು ಹುಂಡಿ ಒಡೆದು ಹಣ ದೋಚಿದ ಘಟನೆ ನಡೆದಿದೆ.

ಮಧ್ಯರಾತ್ರಿ ವೇಳೆ ಕಳ್ಳರು ದೇವಾಲಯದ ಹಿಂಭಾಗದಿಂದ ಪ್ರವೇಶ ಮಾಡಿದ್ದು, ಕಬ್ಬಿಣದ ಗೇಟ್‌ ಬೀಗ ಒಡೆದು ಹುಂಡಿಯಲ್ಲಿದ್ದ ಹಣವನ್ನೆಲ್ಲ ದೋಚಿ ಪರಾರಿಯಾಗಿದ್ದಾರೆ.

ಇಂದು ಶನಿವಾರ ಮಹಿಳೆಯೊಬ್ಬರು ಎಂದಿನಂತೆ ದೇವಸ್ಥಾನ ಸ್ವಚ್ಛಗೊಳಿಸಲು ಬಂದಾಗ ಬಾಗಿಲು ತೆರೆದಿರುವುದು ಕಂಡು ಬಂದಿದೆ. ಅರ್ಚಕರಿಗೆ ವಿಷಯ ಮುಟ್ಟಿಸಿದ್ದು, ಕೂಡಲೇ ಅವರು ಪೊಲೀಸರಿಗೆ ದೂರನ್ನು ನೀಡಿದ್ದಾರೆ.

Comments are closed.