Athletics: ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್: ಕುಕ್ಕುಂದೂರಿನ ಹೇಮಲತಾ ಸುಧಾಕರ್ ಶೆಟ್ಟಿಗೆ ಬೆಳ್ಳಿ ಪದಕ

Share the Article

Athletics: ಥೈಲ್ಯಾಂಡಿನ ಚಿಯಾಂಗ್ ರೈ ಮೈನ್ ಸ್ಟೇಡಿಯಂನಲ್ಲಿ ಫೆಬ್ರವರಿ 12 ರಿಂದ 16 ರವರೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಥೈಲ್ಯಾಂಡ್ ಮಾಸ್ಟರ್ಸ್ ಅಥ್ಲೆಟಿಕ್ಸ್ (Athletics) ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕುಕ್ಕುಂದೂರು ಹೊಸಮನೆ ನಿವಾಸಿ ಶ್ರೀಮತಿ ಹೇಮಲತಾ ಸುಧಾಕರ್ ಶೆಟ್ಟಿ ಅವರು ಜಾವೆಲಿನ್ ಥ್ರೋ , ದಿಸ್ ಕಸ್ ಥ್ರೋ, ಶಾಟ್ ಪುಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿ 3 ಪಂದ್ಯದಲ್ಲಿಯೂ ಬೆಳ್ಳಿ ಪದಕ ಪಡೆದಿರುತ್ತಾರೆ.

ಶ್ರೀಮತಿ ಹೇಮಲತಾ ಸುಧಾಕರ್ ಶೆಟ್ಟಿ ಅವರು ಕ್ರೀಡಾ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆಯನ್ನು ಮಾಡಿ ಊರಿಗೆ ಕೀರ್ತಿಯನ್ನು ತರಲಿ ಎಂದು ಕುಕ್ಕುಂದೂರು ಫ್ರೆಂಡ್ಸ್ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಶುಭಹಾರೈಸಿದ್ದಾರೆ.

Comments are closed.