Marriage : ವಧು ಸಿಗದಿದ್ದಕ್ಕೆ ರೈತ ಆತ್ಮಹತ್ಯೆ

Share the Article

Haveri: ವಧು ಸಿಗದಿದ್ದಕ್ಕೆ ನೊಂದ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ ಘಟನೆ ತಾಲೂಕಿನ ಕಳ್ಳಿಹಾಳ ಗ್ರಾಮದಲ್ಲಿ ಗುರುವಾರ ನಡೆದಿದೆ.

ಹಾವೇರಿ ತಾಲ್ಲೂಕು ಕಲ್ಲಿಹಾಳ ಗ್ರಾಮದ ಪ್ರಕಾಶ ಬಸವರಾಜ್‌ ಹೂಗಾರ (35) ಆತ್ಮಹತ್ಯೆಗೆ ಶರಣಾದ ರೈತ. ಮದುವೆಯಾಗಲು ಹಲವಾರು ಕಡೆಗಳಲ್ಲಿ ವಧು ಹುಡುಕಿದರೂ ಸಿಕ್ಕಿರಲಿಲ್ಲ. ಫೆ.20, 6.30 ರ ಸುಮಾರಿಗೆ ತನ್ನ ಮನೆಯ ಬೆಡ್‌ರೂಂನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತನ ತಂದೆ ಬಸವರಾಜ ಹೂಗಾರ ದೂರು ನೀಡಿದ್ದು, ಹಾವೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.