Heart Attack: ಹೃದಯಾಘಾತಕ್ಕೆ 10 ನೇ ತರಗತಿ ವಿದ್ಯಾರ್ಥಿ ಸಾವು

Heart Attack: 16 ವರ್ಷದ ರಾಹುಲ್ ಎಂಬ ಹುಡುಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಬೈರಾಪುರ ಗ್ರಾಮದ ಜಯರಾಂ ಅನ್ನುವವರ ಪುತ್ರ ರಾಹುಲ್.

ತುಮಕೂರಿನ ಚಿಕ್ಕನಾಯಕನಳ್ಳಿಯಲ್ಲಿ ಈ ಘಟನೆ ನಡೆದಿದೆ. ನಿನ್ನೆ ಶಾಲೆಯಿಂದ ಮನೆಗೆ ಬಂದಿದ್ದ ಬಾಲಕನಿಗೆ ರಾತ್ರಿ 9.30 ರ ಸುಮಾರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಆತನನ್ನು ಹುಳಿಯಾರು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾನೆ.
ಹುಳಿಯಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Comments are closed.