Brazil: ಚಿಟ್ಟೆ ಕಚ್ಚಿ ಯುವಕ ಸಾವು !!

Share the Article

Brazil: ಚಿಟ್ಟೆಯೊಂದು ಕಚ್ಚಿ ಯುವಕನೋರ್ವ ಮೃತಪಟ್ಟಂತಹ ಅಘಾತಕಾರಿ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ. ಈ ಕುರಿತು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಹೌದು, 14 ವರ್ಷದ ಡೇವಿ ನುನೆಸ್ ಮೊರೇರಾ ಅನಾರೋಗ್ಯದಿಂದ ಬಳಲುತ್ತಿದ್ದ ವಿಟೋರಿಯಾ ಡಿ ಕಾನ್ಕ್ವಿಸ್ಟಾದ ಆಸ್ಪತ್ರೆಯಲ್ಲಿ ಏಳು ದಿನಗಳ ಕಾಲ ತೀವ್ರ ನೋವಿನಿಂದ ಬಳಲುತ್ತಿದ್ದನು. ಚಿಕಿತ್ಸೆ ವೇಳೆ ಈತನು ಚಿಟ್ಟೆಯ ಮುಳ್ಳಿನಿಂದಾದ ಅಲರ್ಜಿಯ ಪ್ರತಿಕ್ರಿಯೆ ಅಥವಾ ಸೋಂಕಿನಿಂದ ಉಂಟಾದ ನೋವಿನಿಂದ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಅಲ್ಲದೆ ಯುವಕನು ಸತ್ತ ಚಿಟ್ಟೆಯನ್ನು ನೀರಿನೊಂದಿಗೆ ಬೆರೆಸಿ ಮಿಶ್ರಣವನ್ನು ತನ್ನ ಕಾಲಿಗೆ ಚುಚ್ಚಿದ್ದಾಗಿ ಒಪ್ಪಿಕೊಂಡಿದ್ದಾನೆ. ಹೀಗಾಗಿ ಯುವಕ ಎಂಬಾಲಿಸಮ್, ಸೋಂಕು ಅಥವಾ ಅಲರ್ಜಿಯ ಪ್ರತಿಕ್ರಿಯೆಯಿಂದ ಬಳಲಿರಬಹುದು ಎಂದು ಆಸ್ಪತ್ರೆಯ ತಜ್ಞರು ಊಹಿಸಿದ್ದಾರೆ. “ಅವರು ಈ ಮಿಶ್ರಣವನ್ನು ಹೇಗೆ ತಯಾರಿಸಿದರು ಅಥವಾ ದೇಹಕ್ಕೆ ಚುಚ್ಚುವಲ್ಲಿ ಯಶಸ್ವಿಯಾದ ತುಣುಕುಗಳ ಗಾತ್ರ ನಮಗೆ ತಿಳಿದಿಲ್ಲ. ಒಳಗೆ ಗಾಳಿ ಉಳಿದಿರಬಹುದು, ಇದು ಎಂಬಾಲಿಸಮ್ಗೆ ಕಾರಣವಾಗಬಹುದು” ಎಂದು ಅವರು ಹೇಳಿದ್ದಾರೆ.

Comments are closed.