Illicit Relationship: ಪಾಳು ಮನೆಯಲ್ಲಿ ಪತ್ನಿ-ಪ್ರಿಯಕರ ಸರಸ ಸಲ್ಲಾಪ; ಪತಿಯಿಂದ ಪ್ರಿಯಕರನ ಕೊಲೆ

Illicit Relationship: ಪಾಳು ಮನೆಯೊಂದರಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನ ಮೇಲೆ ಪತಿ, ಪುತ್ರಿ, ಅಳಿಯ ಸೇರಿ ಮಾರಾಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ ಪರಿಣಾಮ ಪ್ರಿಯಕರ ಸಾವಿಗೀಡಾಗಿದ್ದು, ಪತ್ನಿ ಗಂಭಿರವಾಗಿ ಗಾಯಗೊಂಡಿರುವ ಘಟನೆಯೊಂದು ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚನ್ನಸಂದ್ರ ನಿವಾಸಿ ಕಿಶೋರ್ ಕುಮಾರ್ (38) ಕೊಲೆಯಾದವ. ಈತನ ಪ್ರೇಯಸಿ ಅರುಂಧತಿ (37) ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುರುವಾರ ಮಧ್ಯಾಹ್ನ 1.30 ಕ್ಕೆ ಕಾಡುಗೋಡಿ ಸಮೀಪದ ಬೆಳತ್ತೂರು ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಗಾಯಾಳು ಅರುಂಧತಿ ಪತಿ ಯಲ್ಲಪ್ಪ (45) ಪುತ್ರಿ ಪೂಜಾ (20), ಅಳಿಯ ವೆಂಕಟ ರಾಮು (24) ನನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಕೆಲ ವರ್ಷಗಳ ಹಿಂದೆ ಪರಿಚಿತನಾಗಿದ್ದ ದೂರದ ಸಂಬಂಧಿ ಕಿಶೋರ್ ಕುಮಾರ್ ಜೊತೆ ಅರುಂಧತಿ ಅನೈತಿಕ ಸಂಬಂಧ ಇರಿಸಿಕೊಂಡಿದ್ದಳು. ಆರು ತಿಂಗಳಿನಿಂದ ಅರುಂಧತಿ ಪತಿ ತೊರೆದು ಪುತ್ರಿ ಪೂಜಾ ಜೊತೆಗೆ ಬೆಳತ್ತೂರಿನಲ್ಲಿ ವಾಸ ಮಾಡುತ್ತಿದ್ದಳು. ಪಾಳು ಮನೆಯಲ್ಲಿ ಆಗಾಗ ಈ ಇಬ್ಬರು ಪ್ರೇಮಿಗಳು ಭೇಟಿಯಾಗುತ್ತಿದ್ದರು. ಗುರುವಾರ ಕೂಡಾ ಭೇಟಿಯಾಗಿದ್ದಾರೆ. ಇದೇ ಸಮಯಕ್ಕೆ ಪತಿ ಯಲ್ಲಪ್ಪ ಅಲ್ಲಿಗೆ ಬಂದಾಗ ಪತ್ನಿ ಅರುಂಧತಿ, ಆಕೆಯ ಪ್ರಿಯಕರ ಕಿಶೋರ್ ಕುಮಾರ್ ಒಟ್ಟಿಗೆ ಸಿಕ್ಕಿಬಿದ್ದಿದ್ದಾರೆ.
Comments are closed.