Gold Price : ಮತ್ತೆ ಗಗನಕ್ಕೇರಿದ ಬಂಗಾರದ ಬೆಲೆ !!

Share the Article

Gold Price: ಚಿನ್ನದ ಬೆಲೆ ಯಾವಾಗ ಏರುತ್ತದೆ? ಯಾವಾಗ ಇಳಿಯುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ಕೆಲವು ದಿನಗಳ ಹಿಂದೆ ಚಿನ್ನದ ಬೆಲೆ ಇಳಿಕೆ ಕಂಡಿತ್ತು. ಆದರೆ ಈಗ ಚಿನ್ನದ ಬೆಲೆ ಮತ್ತೆ ಗಗನಕ್ಕೇರಿದೆ.

ಹೌದು, ಗುರುವಾರ ಆಭರಣ ಚಿನ್ನದ ಬೆಲೆ ಗ್ರಾಮ್​ಗೆ 35 ರೂನಷ್ಟು ಹೆಚ್ಚಾಗಿದೆ. ಅಪರಂಜಿ ಚಿನ್ನದ ಬೆಲೆಯಲ್ಲಿ 39 ರೂ ಏರಿಕೆ ಆಗಿದೆ. ಸೋಮವಾರದಿಂದ ಸತತ ನಾಲ್ಕನೇ ದಿನ ಈ ಸ್ವರ್ಣ ದುಬಾರಿಯಾಗಿದೆ. ಅಪರಂಜಿ ಚಿನ್ನದ ಬೆಲೆ ಭಾರತದಲ್ಲಿ 8,800 ರೂ ಮೈಲಿಗಲ್ಲು ಮುಟ್ಟಿ ಹೊಸ ದಾಖಲೆ ಬರೆದಿದೆ. 18 ಕ್ಯಾರಟ್ ಚಿನ್ನದ ಬೆಲೆಯೂ 6,600 ರೂ ಗಡಿ ಮುಟ್ಟಿ ದಾಖಲೆ ಮಾಡಿದೆ.

ಇತ್ತ ಚಿನ್ನದ ಬೆಲೆ ಏರಿಕೆ ಆಗುತ್ತಿದ್ದರೂ ಬೆಳ್ಳಿ ಸ್ತಬ್ಧತೆ ಮುಂದುವರಿದಿದೆ. ಇಂದೂ ಕೂಡ ಬೆಳ್ಳಿ ಬೆಲೆಯ ವ್ಯತ್ಯಯವಾಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 80,700 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 88,040 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,050 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 80,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 10,050 ರುಪಾಯಿಯಲ್ಲಿ ಇದೆ.

Comments are closed.