Divorce : ಅಧಿಕೃತವಾಯ್ತು ಟೀಂ ಇಂಡಿಯಾ ಆಟಗಾರ ಚಹಲ್ ಹಾಗೂ ಧನುಶ್ರೀ ಡಿವೋರ್ಸ್ ಕೇಸ್ – ಪರಿಹಾರ ಕೊಟ್ಟಿದ್ದು ಎಷ್ಟು ಕೋಟಿ ಗೊತ್ತಾ ..?

Divorce: ಟೀಮ್ ಇಂಡಿಯಾ ಆಟಗಾರರ ಡಿವೋರ್ಸ್ ಸರಣಿ ಮುಂದುವರೆಯುತ್ತಲೇ ಇದೆ. ಅಂತೆಯೇ ಯಜುವೇಂದ್ರ ಚಹಾಲ್ ಹಾಗೂ ನಟಿ ಧನುಶ್ರೀ ಅವರ ಡಿವೋರ್ಸ್ ವಿಚಾರ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿತ್ತು. ಇಬ್ಬರು ಅಧಿಕೃತವಾಗಿ ಹೇಳಿರಲಿಲ್ಲ. ಆದರೆ ಈಗ ಡಿವೋರ್ಸ್ ವಿಚಾರ ಅಧಿಕೃತವಾಗಿದ್ದು ಬಾಂಧ್ರಾ ಪ್ಯಾಮಿಲಿ ಕೋರ್ಟ್ ಇಬ್ಬರ ಅರ್ಜಿಯನ್ನು ಪುರಸ್ಕರಿಸಿ, ವಿಚ್ಚೇದನ ಮಂಜೂರು ಮಾಡಿದೆ.
ಹೌದು, ಚಹಾಲ್ ಹಾಗೂ ನಟಿ ಧನುಶ್ರೀ ವೈಯಕ್ತಿಕ ಜೀವನದಲ್ಲಿ ಹೊಂದಾಣಿಕೆಯಾಗುತ್ತಿಲ್ಲ ಎಂದು ಕೋರ್ಟ್ ಗೆ ಕಾರಣ ನೀಡಿ, ಡಿವೋರ್ಸ್ ಪಡೆದಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡ ಹಾಕಿದ್ದಾರೆ. ಹಾಗಿದ್ರೆ ಚಹಾಲ್ ಧನುಶ್ರೀಗೆ ಕೊಟ್ಟ ಪರಿಹಾರ ಎಷ್ಟು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.
ಡೈವೋರ್ಸ್ ಬಳಿಕ ಚಹಲ್ ತಮ್ಮ ಮಾಜಿ ಪತ್ನಿ ಧನುಶ್ರೀಗೆ 60 ಕೋಟಿ ಜೀವನಾಂಶ ನೀಡಲು ಒಪ್ಪಿದ್ದಾರೆಂದು ಸುದ್ದಿಯಾಗಿದೆ. ಆದರೆ ಈ ಬಗ್ಗೆ ಇಬ್ಬರು ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ.
Comments are closed.