LPG ಸಿಲಿಂಡರ್ ಕ್ಯಾಪ್ ತೆಗೆಯಲು ಪರದಾಡುತ್ತೀರಾ? ಜಸ್ಟ್ ಒಂದು ಸ್ಪೂನ್ ಬಳಸಿ ಸೆಕೆಂಡ್ ನಲ್ಲಿ ಓಪನ್ ಮಾಡಿ !!

Share the Article

LPG: ಮನೆಯಲ್ಲಿ ಗೃಹಿಣಿಯರಿಗೆ ಒಂದು ದೊಡ್ಡ ಸಮಸ್ಯೆ ಎಂದರೆ ಅದು LPG ಸಿಲಿಂಡರ್ ಕ್ಯಾಪ್ ತೆಗೆಯುವುದು. ಪುರುಷರ ಸಹಾಯವಿಲ್ಲದೆ ಮಹಿಳೆಯರು ಮನೆಯನ್ನು ಹೇಗೆ ಬೇಕಾದರೂ ಕೂಡ ನಿಭಾಯಿಸುತ್ತಾರೆ. ಆದರೆ ಈ ಸಿಲಿಂಡರ್ ಕ್ಯಾಪ್ ತೆಗೆಯುವ ವಿಚಾರದಲ್ಲಂತೂ ಕೆಲವರು ತುಂಬಾ ಪರದಾಡುತ್ತಾರೆ. ಒಮ್ಮೊಮ್ಮೆ ಇದು ಪುರುಷರಿಗೂ ಕೂಡ ತುಂಬಾ ಕಷ್ಟವಾಗುತ್ತದೆ. ಆದರೆ ಇನ್ನು ಮುಂದೆ ಆ ಚಿಂತೆ ಬಿಡಿ. ಜಸ್ಟ್ ಒಂದು ಸ್ಪೂನ್ ಬಳಸಿ ಈಸಿಯಾಗಿ ಕ್ಯಾಪ್ ಓಪನ್ ಮಾಡಿ.

ಹೌದು, ಒಂದೇ ಒಂದು ಸ್ಪೂನ್ ಬಳಸಿ ಈ ಸಿಲಿಂಡರ್‌ ಲಾಕ್‌ನ ಸೆಕೆಂಡುಗಳಲ್ಲಿ ಈಸಿಯಾಗಿ ತೆಗೆಯಬಹುದು. ಖಂಡಿತಾ.. ಒಂದು ಸ್ಪೂನ್‌ ಇಲ್ಲ ಫೋರ್ಕ್‌ ಸ್ಪೂನ್‌ ಇದ್ರೆ ಸಾಕು ಸಿಲಿಂಡರ್‌ ಲಾಕ್‌ನ ಈಸಿಯಾಗಿ ಓಪನ್ ಮಾಡಬಹುದು.

ಫೋನ್ ಬಳಸಿ ಓಪನ್ ಮಾಡುವುದು ಹೇಗೆ?

ಕ್ಯಾಪ್‌ನಲ್ಲಿ ಸ್ಟ್ರಿಂಕ್ ಅಟ್ಯಾಚ್ ಆಗಿರೋ ಒಂದು ಲಾಕ್‌ ಇರುತ್ತೆ ನೋಡಿ. ಸಿಲ್ವರ್ ಕಲರ್‌ನ ಲಾಕ್ ಒಳಗೆ ಸ್ಪೂನ್‌ ಹಾಕಿ ಎಳೆಯಬೇಕು. ಫೋರ್ಕ್‌ ಸ್ಪೂನ್‌ ಬಳಸಿದ್ರೆ ಇನ್ನೂ ಸುಲಭವಾಗುತ್ತೆ. ಸಿಲ್ವರ್‌ ಕಲರ್‌ ಲಾಕ್‌ ಒಳಗಡೆ ಸ್ಪೂನ್‌ ಹಾಕಿ ನಿಮ್ಮ ವಿರುದ್ಧ ಕಡೆಗೆ ತಳ್ಳಬೇಕು ಇಲ್ಲ ಎಳೆದುಕೊಳ್ಳಬೇಕು. ಹೀಗೆ ಮಾಡಿದ್ರೆ ಸಾಕು ಥಟ್‌ ಅಂತ ಸಿಲಿಂಡರ್ ಕ್ಯಾಪ್‌ ಓಪನ್‌ ಆಗಿ ಬಿಡುತ್ತೆ.

Comments are closed.