Kodagu: ಕೊಡಗು ಜಿಲ್ಲೆಯ ವಿವಿಧ ಕಡೆ ಮಳೆ

Madikeri: ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ಬುಧವಾರ ಸಾಧಾರಣ ಮಳೆಯಾಗಿದೆ. ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಯವಕಪಾಡಿ, ಕಕ್ಕಬೆ, ಕುಂಜಿಲ, ನಾಲಡಿ, ಚೆಯ್ಯಂಡಾಣೆ ಸೇರಿ ವಿವಿಧ ಕಡೆ ಮಳೆಯಾಗಿದೆ. ಫೆ.21 ರವರೆಗೆ ಜಿಲ್ಲೆಯಲ್ಲಿ ಸಾಧಾರಣಾ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಕೊಡಗು ಜಿಲ್ಲೆಯಾದ್ಯಂತ ಕಾಫಿ ಕೊಯ್ಲು ಮುಕ್ತಾಯದ ಹಂತದಲ್ಲಿದ್ದು, ಈಗಾಗಲೇ ಕೆಲವರು ಕೊಯ್ಲು ಮುಗಿಸಿ ಕೃತಕವಾಗಿ ತೋಟಗಳಿಗೆ ನೀರು ಸಿಂಪಡಿಸುತ್ತಿದ್ದಾರೆ. ಈಗ ಮಳೆಯಾದರೆ ಕಾಫಿ ಹೂವು ಅರಳಲು ಅನುಕೂಲವಾಗುತ್ತದೆ. ಹಾಗಾಗಿ ಜಿಲ್ಲೆಯ ಕಾಫಿ ಬೆಳೆಗಾರರು ಮಳೆಗೆ ಎದುರು ನೋಡುತ್ತಿದ್ದಾರೆ.
Comments are closed.