Koppala: ರೀಲ್ಸ್‌ಗಾಗಿ ನದಿಗೆ ಹಾರಿದ ವೈದ್ಯೆ; ನೋವಿನಲ್ಲೂ ಮಾನವೀಯತೆ ಮೆರೆದ ಕುಟುಂಬ

Koppala: ಡಾ.ಅನನ್ಯ ಅವರ ಮೃತದೇಹ 22 ಗಂಟೆಗಳ ಬಳಿಕ ಪತ್ತೆಯಾಗಿದೆ. ರೀಲ್ಸ್‌ಗಾಗಿ 20 ಅಡಿಯಿಂದ ಹಾರಿದ ಡಾ.ಅನನ್ಯ ಮೈನಪಲ್ಲಿ ಅವರ ಶವ ಪತ್ತೆಯಾಗುವುದು ಬಹಳ ದೊಡ್ಡ ಸವಾಲಿನ ಕೆಲಸವಾಗಿತ್ತು. ಈ ಕಾರ್ಯಾಚರಣೆಯಲ್ಲಿ ತೆಪ್ಪ ಹಾಕುವ ಯುವಕರ ಪಾತ್ರ ಬಹಳ ಮಹತ್ವದ್ದು.

ಅನನ್ಯ ಅವರು ಫೆ.19 ರಂದು ಬೆಳಗ್ಗೆ ಪ್ರವಾಸಕ್ಕಂದು ಬಂದಿದ್ದು, ಸಾಣಾಪುರ ನದಿಯಲ್ಲಿ ರೀಲ್ಸ್‌ಗೆಂದು ಹಾರಿದ್ದರು. ಫೆ.19, 20 ರಂದು ಸತತ 22 ಗಂಟೆಗಳ ಕಾಲ ಹುಡುಕಾಟದ ಬಳಿಕ ಡಾ.ಅನನ್ಯ ಮೃತದೇಹ ದೊರಕಿತ್ತು. ಶವ ಹುಡುಕುವಲ್ಲಿ ಮಹತ್ವದ ಪಾತ್ರ ವಹಿಸಿದವರು ಸಾಣಾಪುರ ಭಾಗದ ತೆಪ್ಪ ಹಾಕುವ ಯುವಕರು. ಯುವಕರ ತಂಡದ ಕಾರ್ಯಕ್ಕೆ ಡಾ.ಅನನ್ಯ ಕುಟುಂಬದವರು ತಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ. ಹೈದ್ರಾಬಾದ್‌ನ ಮೈನಪ್ಪಲ್ಲಿ ಮಾಜಿ ಶಾಸಕ ಹನುಮಂತರಾವ್ 40 ಸಾವಿರ ರೂ. ಹಣ ಬಹುಮಾನ ನೀಡಿದ್ದಾರೆ. ಯುವಕರು ಬೇಡ ಬೇಡ ಅಂದರೂ ನೀವೇ ನಮ್ಮ ಪಾಲಿಗೆ ದೇವರು ನಮ್ಮ ಮಗುವನ್ನು ಹುಡುಕಿಕೊಟ್ಟಿದ್ದೀರಿ ಎಂದು ಹಣ ನೀಡಿದ್ದಾರೆ.
Comments are closed.